ಐದು ಜನರಿಗೆ ಕ್ಷಮಾದಾನ ನೀಡಿದ ಬೈಡನ್

ಜೋ ಬೈಡನ್ | PC : PTI
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಹುದ್ದೆಯಿಂದ ಸೋಮವಾರ ನಿರ್ಗಮಿಸಲಿರುವ ಜೋ ಬೈಡನ್ ರವಿವಾರ ಐದು ವ್ಯಕ್ತಿಗಳಿಗೆ ಅಧ್ಯಕ್ಷರ ಕ್ಷಮಾದಾನ ಘೋಷಿಸಿದ್ದಾರೆ ಮತ್ತು ಇಬ್ಬರು ಕೈದಿಗಳ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿರುವುದಾಗಿ ಶ್ವೇತಭವನ ರವಿವಾರ ಹೇಳಿದೆ.
`ಅಮೆರಿಕವು ಎರಡನೇ ಭರವಸೆಯ ಮೇಲೆ ನಿರ್ಮಿಸಲಾದ ದೇಶವಾಗಿದೆ. ಅಧ್ಯಕ್ಷರಾಗಿ ಅಮೆರಿಕದ ಇತಿಹಾಸದಲ್ಲೇ ಯಾವುದೇ ಇತರ ಅಧ್ಯಕ್ಷರಿಗಿಂತ ಹೆಚ್ಚು ವೈಯಕ್ತಿಕ ಕ್ಷಮೆ ಮತ್ತು ಶಿಕ್ಷೆಯ ಮಾರ್ಪಾಟು ಮಾಡುವ ಮೂಲಕ ಆ ಭರವಸೆಯನ್ನು ವಾಸ್ತವಗೊಳಿಸಲು ನಾನು ಕ್ಷಮೆಯ ಶಕ್ತಿಯನ್ನು ಬಳಸಿದ್ದೇನೆ' ಎಂದು ಬೈಡನ್ ಹೇಳಿದ್ದಾರೆ.
Next Story