ಯುದ್ಧ ಪೀಡಿತ ಗಾಝಾ ಗೆ 100 ಮಿಲಿಯನ್ ಡಾಲರ್ ನೆರವು ಘೋಷಿಸಿದ ಬೈಡೆನ್
Photo: PTI
ಟೆಲ್ ಅವೀವ್ : ಗಾಝಾ ನಗರದ ಆಸ್ಪತ್ರೆಯ ಮೇಲಿನ ದಾಳಿಯನ್ನು ಖಂಡಿಸಿರುವ, ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ 100 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ.
ಇಸ್ರೇಲ್ ಗೆ ರಾಜತಾಂತ್ರಿಕ ಭೇಟಿ ನೀಡಿರುವ ಅಮೇರಿಕಾ ಅಧ್ಯಕ್ಷರು ತಮ್ಮ X ಖಾತೆಯಲ್ಲಿ ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಮಾನವೀಯ ನೆಲೆಯ ಸಹಾಯ ಎಂದು ಹೇಳಿದ್ದಾರೆ.
“ನಾನು ಗಾಝಾ ಮತ್ತು ವೆಸ್ಟ್ ಬ್ಯಾಂಕ್ನಲ್ಲಿ ಮಾನವೀಯ ಸಹಾಯಕ್ಕಾಗಿ 100 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದೇನೆ.
ಈ ಹಣವು 1 ಮಿಲಿಯನ್ಗಿಂತಲೂ ಹೆಚ್ಚಿರುವ ಸಂಘರ್ಷ-ಪೀಡಿತ, ಸ್ಥಳಾಂತರಗೊಂಡ ಫೆಲೆಸ್ತೀನಿಯನ್ನರ ಸಹಾಯಕ್ಕಾಗಿ. ಈ ನೆರವು ಹಮಾಸ್ ಅಥವಾ ಇನ್ಯಾರಿಗೋ ಅಲ್ಲ. ಈ ನೆರವು ಅಗತ್ಯವಿರುವವರಿಗೆ ತಲುಪುತ್ತದೆ. ಅರ್ಹರಿಗೆ ತಲುಪಿಸಲು ಬೇಕಾದ ವ್ಯವಸ್ಥೆ ನಮ್ಮಲ್ಲಿದೆ” ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
Next Story