ಒತ್ತೆಯಾಳುಗಳ ಬಿಡುಗಡೆ ಬಳಿಕ ಕದನವಿರಾಮ ಚರ್ಚೆ; ಬೈಡನ್
ಜೋ ಬೈಡನ್ | Photo: PTI
ವಾಷಿಂಗ್ಟನ್: ಅಕ್ಟೋಬರ್ 7ರ ದಾಳಿಯಲ್ಲಿ ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿರುವ ಎಲ್ಲರನ್ನೂ ಬಿಡುಗಡೆಗೊಳಿಸಿದ ಬಳಿಕವಷ್ಟೇ ಗಾಝಾದಲ್ಲಿ ಕದನವಿರಾಮದ ಬಗ್ಗೆ ಮಾತುಕತೆ ಸಾಧ್ಯ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
‘ಕದನ ವಿರಾಮ ಜಾರಿಗೆ ಪ್ರತಿಯಾಗಿ ಒತ್ತೆಯಾಳುಗಳ ಬಿಡುಗಡೆ’ ಎಂಬ ಸೂತ್ರದ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೈಡನ್ ‘ಮೊದಲು ಒತ್ತೆಯಾಳುಗಳ ಬಿಡುಗಡೆ, ಬಳಿಕ ಮಾತುಕತೆ’ ಎಂದರು. ಪ್ರತ್ಯೇಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ‘ಮಂಗಳವಾರ ಇಬ್ಬರು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಿರುವುದನ್ನು ಸ್ವಾಗತಿಸುತ್ತೇವೆ. ಗಾಝಾದಲ್ಲಿ ಇನ್ನುಳಿದ ಒತ್ತೆಯಾಳುಗಳ ಬಿಡುಗಡೆಗೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮುಂದುವರಿಸಲಾಗುವುದು’ ಎಂದರು.
Next Story