ಹಮಾಸ್ ದಾಳಿಗೆ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಪ್ರಸ್ತಾವನೆ ಕಾರಣ ಎಂದಿದ್ದ ಬೈಡನ್ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ : ಶ್ವೇತ ಭವನ
Photo- PTI
ಹೊಸದಿಲ್ಲಿ: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಸ್ಥಾಪನೆ ಪ್ರಸ್ತಾವನೆಯು ಇಸ್ರೇಲ್ ಮೇಲೆ ಹಮಾಸ್ ದಾಳಿಗೆ ಕಾರಣವೆಂಬುದು ತಮ್ಮ ಅನಿಸಿಕೆಯಾಗಿದೆ ಎಂಬ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆಂಬ ಮಾಧ್ಯಮ ವರದಿಗಳ ಕುರಿತು ದೇಶದ ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ಅಧಿಕಾರಿ ಜಾನ್ ಕಿರ್ಬಿ ಸ್ಪಷ್ಟೀಕರಣ ನೀಡಿ, ಅಧ್ಯಕ್ಷರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.
ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧ ಸುಧಾರಣೆಗೆ ನಾವು ನಡೆಸುತ್ತಿರುವ ಪ್ರಯತ್ನ ಹಾಗೂ ಎರಡು-ದೇಶ ಪರಿಹಾರ ಕುರಿತಂತೆ ಮಹತ್ತರ ಹೆಜ್ಜೆ ಹಮಾಸ್ ದಾಳಿಗೆ ಕಾರಣವಾಗಿರಬಹುದು ಎಂದು ತಾವು ಅಂದುಕೊಂಡಿರುವುದಾಗಿ ಅವರು ಹೇಳಿದ್ದರು,” ಎಂದು ಕಿರ್ಬಿ ಹೇಳಿದ್ದಾರೆ.
ಬೈಡನ್ ಅವರು ತಮ್ಮ ಹೇಳಿಕೆಯಲ್ಲಿ ಇಂಡಿಯಾ-ಮಿಡ್ಲ್ ಈಸ್ಟ್ ಯುರೋಪ್ ಇಕನಾಮಿಕ್ ಕಾರಿಡಾರ್ ಅನ್ನು ಉಲ್ಲೇಖಿಸಿಲ್ಲ ಎಂದೂ ಹೇಳಲಾಗಿದೆ.
Next Story