ಫೆಲೆಸ್ತೀನಿನ ಪ್ರತಿರೋಧಕ್ಕೆ ಮಹಾನ್ ಗೆಲುವು : ಇರಾನ್

ಸಾಂದರ್ಭಿಕ ಚಿತ್ರ
ಟೆಹ್ರಾನ್: ಗಾಝಾದಲ್ಲಿ ಯುದ್ಧವಿರಾಮವು ಫೆಲೆಸ್ತೀನಿಯನ್ ಪ್ರತಿರೋಧಕ್ಕೆ ಮಹಾನ್ ಗೆಲುವಾಗಿದೆ ಎಂದು ಇರಾನ್ನ ರೆವೊಲ್ಯುಷನರಿ ಗಾಡ್ರ್ಸ್ ಗುರುವಾರ ಹೇಳಿದ್ದು ಇಸ್ರೇಲ್ನಿಂದ ಯಾವುದೇ ಸಂಭನವೀಯ ಉಲ್ಲಂಘನೆಯ ಬಗ್ಗೆ ಎಚ್ಚರಿಕೆ ನೀಡಿದೆ.
ಇಸ್ರೇಲನ್ನು ಹಿಮ್ಮೆಟ್ಟುವಂತೆ ಒತ್ತಾಯಿಸಲಾಗಿದೆ. ಯುದ್ಧದ ಅಂತ್ಯ ಮತ್ತು ಇಸ್ರೇಲ್ ನ ಮೇಲೆ ಕದನ ವಿರಾಮ ಹೇರಿಕೆ ಫೆಲೆಸ್ತೀನ್ನ ಸ್ಪಷ್ಟ ಮತ್ತು ಪ್ರಮುಖ ಗೆಲುವಾಗಿದೆ ಮತ್ತು ಇಸ್ರೇಲ್ ಆಡಳಿತದ ದೊಡ್ಡ ಸೋಲಾಗಿದೆ ಎಂದು ಇರಾನ್ ಹೇಳಿದೆ. ಇರಾನ್ ಮತ್ತು ಅದು ಮಧ್ಯಪ್ರಾಚ್ಯದಲ್ಲಿ ಬೆಂಬಲಿಸುವ ಸಶಸ್ತ್ರ ಹೋರಾಟಗಾರರ ಗುಂಪುಗಳಾದ ಯೆಮನ್ನ ಹೌದಿಗಳು, ಲೆಬನಾನ್ನ ಹಿಜ್ಬುಲ್ಲಾ ಸಂಘರ್ಷದುದ್ದಕ್ಕೂ ಹಮಾಸ್ಗೆ ನಿರಂತರ ಬೆಂಬಲ ನೀಡಿವೆ.
`ಪ್ರತಿರೋಧವು ಜೀವಂತವಾಗಿದೆ, ಅಭಿವೃದ್ಧಿ ಹೊಂದುತ್ತಿದೆ ಮತ್ತು ಬಲಿಷ್ಟವಾಗಿದೆ. ಮತ್ತು ಅಲ್-ಅಕ್ಸಾ ಮಸೀದಿಯನ್ನು ಹಾಗೂ ಜೆರುಸಲೇಂ ಅನ್ನು ವಿಮೋಚನೆಗೊಳಿಸುವ ದೈವಿಕ ಭರವಸೆಯಲ್ಲಿ ಆಳವಾದ ನಂಬಿಕೆಯನ್ನು ಹೊಂದಿದೆ' ಎಂದು ರೆವೊಲ್ಯುಷನರಿ ಗಾಡ್ರ್ಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು, ಇಸ್ರೇಲ್ನಿಂದ ಕದನ ವಿರಾಮ ಉಲ್ಲಂಘನೆಯ ವಿರುದ್ಧ ಎಚ್ಚರಿಕೆ ನೀಡಿದೆ.
ಫೆಲೆಸ್ತೀನಿಯನ್ ಪ್ರತಿರೋಧ ಮತ್ತು ಇರಾನ್ ಬೆಂಬಲಿತ ಪ್ರತಿರೋಧ ಒಕ್ಕೂಟ(ಹಮಾಸ್, ಹೌದಿ, ಹಿಜ್ಬುಲ್ಲಾ) ಇಸ್ರೇಲನ್ನು ಹಿಮ್ಮೆಟ್ಟುವಂತೆ ಒತ್ತಡ ಹೇರಲು ಯಶಸ್ವಿಯಾಗಿದೆ ಎಂದು ಇರಾನ್ನ ಪರಮೋಚ್ಛ ನಾಯಕ ಅಯತುಲ್ಲಾ ಆಲಿ ಖಾಮಿನೈ ಹೇಳಿದ್ದಾರೆ.