ಗ್ರೀಕ್ ದ್ವೀಪದ ಬಳಿ ವಲಸಿಗರಿದ್ದ ದೋಣಿ ಮುಳುಗಿ 4 ಮಂದಿ ಸಾವು
ಸಾಂದರ್ಭಿಕ ಚಿತ್ರ | PC : freepik.com
ಅಥೆನ್ಸ್: ಟರ್ಕಿಯ ಕಡಲತೀರದಿಂದ ಗ್ರೀಕ್ ದ್ವೀಪದತ್ತ ಸಾಗುತ್ತಿದ್ದ ವಲಸಿಗರಿದ್ದ ದೋಣಿಯು ಲೆಸ್ಬಾಸ್ ದ್ವೀಪದ ಉತ್ತರ ಕರಾವಳಿಯ ಬಳಿ ಗುರುವಾರ ಬೆಳಿಗ್ಗೆ ಮುಳುಗಿದ್ದು ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. 23 ಮಂದಿಯನ್ನು ರಕ್ಷಿಸಲಾಗಿದೆ ಎಂದು ಗ್ರೀಸ್ನ ಕರಾವಳಿ ಕಾವಲುಪಡೆ ಗುರುವಾರ ಹೇಳಿದೆ.
ಈ ಪ್ರದೇಶದಲ್ಲಿ ಹವಾಮಾನವು ಉತ್ತಮವಾಗಿದ್ದರಿಂದ ತಾಂತ್ರಿಕ ಸಮಸ್ಯೆ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ. ಕರಾವಳಿ ಭದ್ರತಾ ಪಡೆಯ ಮೂರು ನೌಕೆಗಳು, ವಾಯುಪಡೆಯ ಹೆಲಿಕಾಪ್ಟರ್ ಹಾಗೂ ಸಮೀಪದಲ್ಲಿದ್ದ ಮತ್ತೊಂದು ದೋಣಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ದೋಣಿಯಲ್ಲಿ ಎಷ್ಟು ಜನರಿದ್ದರು ಹಾಗೂ ಯಾವ ದೇಶದವರು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story