ಸುನಿತಾ ವಿಲಿಯಮ್ಸ್, ವಿಲ್ಮೋರ್ ಇಲ್ಲದೆ ಭೂಮಿಗೆ ವಾಪಾಸಾದ ʼಸ್ಟಾರ್ಲೈನರ್ʼ
Photo: NASA
ಹೊಸದಿಲ್ಲಿ: ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಲ್ಲದೆ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಶುಕ್ರವಾರ ತಡರಾತ್ರಿ ನ್ಯೂ ಮೆಕ್ಸಿಕೋ ಮರುಭೂಮಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ವರದಿಯಾಗಿದೆ.
ತಾಂತ್ರಿಕ ಸಮಸ್ಯೆಗಳಿಂದ ಬಾಹ್ಯಾಕಾಶಕ್ಕೆ ಹಾರಿಹೋದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 2025ರ ಫೆಬ್ರವರಿಯವರೆಗೆ ಬಾಹ್ಯಾಕಾಶದಲ್ಲೇ ಇರುವಂತಾಗಿದೆ. ಜೂನ್ನಲ್ಲಿ ಗಗನಯಾತ್ರಿಗಳು ಒಂದು ವಾರದ ಕಾಲ ಬಾಹ್ಯಾಕಾಶದಲ್ಲಿ ಉಳಿಯುವ ಉದ್ದೇಶದಿಂದ ತೆರಳಿದ್ದರು.
ಸ್ಟಾರ್ಲೈನರ್ ಯಾವುದೇ ತೊಂದರೆಯಿಲ್ಲದೆ ಭೂಮಿಗೆ ಮರಳಿದೆ. ಸ್ಟಾರ್ಲೈನರ್ ಮರುಭೂಮಿಯಲ್ಲಿ ಇಳಿಯುವ ಲೈವ್ ವಿಡಿಯೋವನ್ನು NASA ಹಂಚಿಕೊಂಡಿದೆ.
ಈ ಮೊದಲು ಸ್ಟಾರ್ಲೈನರ್ ಬೇರ್ಪಡಿಸುವಿಗೆ ಅಪಾಯಕಾರಿ ಎಂದು ನಾಸಾ ಹೇಳಿತ್ತು. ಆದರೆ ವಿಲ್ಮೋರ್ ಮತ್ತು ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಹೆಚ್ಚುವರಿ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಹೊಂದಿದ್ದು, ಸೇಫ್ ಆಗಿದ್ದಾರೆ. ಫೆ.2025ರಲ್ಲಿ ಸ್ಪೇಸ್ಎಕ್ಸ್ ಮೂಲಕ ಗಗನಯಾತ್ರಿಗಳು ಭೂಮಿಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
LIVE: @BoeingSpace's uncrewed #Starliner spacecraft is leaving orbit and touching down at New Mexico's White Sands Space Harbor. Landing is now targeted for 12:01am ET (0401 UTC) on Sept. 7. https://t.co/jlCEKXRhkx
— NASA (@NASA) September 7, 2024