ಪೂರ್ವ ಉಕ್ರೇನ್ನಲ್ಲಿ ಬಾಂಬ್ ಸ್ಫೋಟ
ರಶ್ಯ ಬೆಂಬಲಿತ ಸಂಸದ ಮೃತ್ಯು
ಸಾಂದರ್ಭಿಕ ಚಿತ್ರ
ಕೀವ್: ಪೂರ್ವ ಉಕ್ರೇನ್ನ ಲುಹಾಂಸ್ಕ್ ನಗರದಲ್ಲಿ ಬುಧವಾರ ನಡೆದ ಕಾರು ಬಾಂಬ್ ದಾಳಿಯಲ್ಲಿ ರಶ್ಯ ಬೆಂಬಲಿತ ಸಂಸದ ಮಿಖಾಯಿಲ್ ಫಿಲಿಪೊನೆಂಕೊ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕಾರಿನಲ್ಲಿ ಇರಿಸಿದ್ದ ಬಾಂಬ್ ಸ್ಫೋಟಗೊಂಡು ಫಿಲಿಪೊನೆಂಕೊ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
ಪೂರ್ವ ಉಕ್ರೇನ್ ಪ್ರಾಂತದಲ್ಲಿ 2014ರಿಂದ ನಡೆಯುತ್ತಿರುವ ರಶ್ಯ ಪರ ಪ್ರತ್ಯೇಕತಾವಾದಿಗಳ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ನಿವೃತ್ತ ಭದ್ರತಾ ಅಧಿಕಾರಿ ಫಿಲಿಪೊನೆಂಕೊ, ಪ್ರತ್ಯೇಕತಾವಾದಿ ಗುಂಪು `ಲುಹಾಂಸ್ಕ್ ಪೀಪಲ್ಸ್ ರಿಪಬ್ಲಿಕ್' ಸೇನೆಯ ಉನ್ನತ ಕಮಾಂಡರ್ ಆಗಿದ್ದರು. ರಶ್ಯ ಬೆಂಬಲಿತ ಲುಹಾಂಸ್ಕ್ ಸಂಸತ್ಗೆ ಸೆಪ್ಟಂಬರ್ನಲ್ಲಿ ನಡೆದ ವಿವಾದಾತ್ಮಕ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದರು. ಆದರೆ ಈ ಚುನಾವಣೆಯನ್ನು ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡಿಲ್ಲ.
Next Story