ಬ್ರಿಟನ್ | ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಲಿ ಸಚಿವರ ನಿರಾಸಕ್ತಿ
Photo : Times of India
ಲಂಡನ್ : ಬ್ರಿಟನ್ನಲ್ಲಿ ಜುಲೈಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ ಎಂದು ವಸತಿ ಸಚಿವ ಮೈಕೆಲ್ ಗೋವ್ ಘೋಷಿಸಿದ್ದಾರೆ.
ಮೈಕಲ್ ಗೋವ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಿಕಟವಲಯದಲ್ಲಿ ಗುರುತಿಸಿಕೊಂಡಿದ್ದರು ಮತ್ತು ಈ ಹಿಂದೆ ಶಿಕ್ಷಣ, ನ್ಯಾಯ ಮತ್ತು ಪರಿಸರ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದರೊಂದಿಗೆ ಹಾಲಿ ಪ್ರಧಾನಿ ರಿಷಿ ಸುನಾಕ್ ಅವರ ಕನ್ಸರ್ವೇಟಿವ್ ಪಕ್ಷದ 77 ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದಂತಾಗಿದೆ.
ಜುಲೈ 4ರಂದು ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ರಿಷಿ ಸುನಾಕ್ ಬುಧವಾರ ಘೋಷಿಸಿದ್ದರು. ಆದರೆ ಚುನಾವಣೆ ನಡೆದರೆ ಹಾಲಿ ಆಡಳಿತ ಪಕ್ಷಕ್ಕೆ ಪ್ರಮುಖ ವಿರೋಧ ಪಕ್ಷ ಲೇಬರ್ ಪಾರ್ಟಿಯೆದುರು ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾದ ಬಳಿಕ ಕನ್ಸರ್ವೇಟಿವ್ ಪಕ್ಷದ ಬಹುತೇಕ ಸಂಸದರು ಚುನಾವಣೆಯಲ್ಲಿ ಮರು ಸ್ಪರ್ಧೆಗೆ ನಿರಾಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.
Next Story