ಬ್ರಿಟನ್: 3 ಶಂಕಿತ ರಶ್ಯನ್ ಗೂಢಚಾರರ ಬಂಧನ
ಲಂಡನ್, ಆ.15: ರಾಷ್ಟ್ರೀಯ ಭದ್ರತಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಬ್ರಿಟನ್ನಲ್ಲಿ ರಶ್ಯದ ಮೂವರು ಶಂಕಿತ ಗೂಢಚಾರರನ್ನು ಬಂಧಿಸಲಾಗಿದೆ ಎಂದು ಬಿಬಿಸಿ ಮಂಗಳವಾರ ವರದಿ ಮಾಡಿದೆ.
ಈ ಮೂವರೂ ಬಲ್ಗೇರಿಯನ್ ಪ್ರಜೆಗಳಾಗಿದ್ದು ರಶ್ಯನ್ ಭದ್ರತಾ ಸಂಸ್ಥೆಗಳ ಪರ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಓರ್ಲಿನ್ ರುಸೋವ್, ಬಿಝರ್ ಝಂಬಜೋವ್ ಹಾಗೂ ಕ್ಯಾಥ್ರಿನ್ ಇವನೋವಾ ಎಂದು ಗುರುತಿಸಲಾಗಿದ್ದು ಇವರ ಬಳಿ ಬ್ರಿಟನ್, ಬಲ್ಗೇರಿಯಾ, ಫ್ರಾನ್ಸ್ ಸೇರಿದಂತೆ 9 ದೇಶಗಳ ನಕಲಿ ಪಾಸ್ಪೋರ್ಟ್, ಗುರುತು ಪತ್ರ ಸೇರಿದಂತೆ ನಕಲಿ ದಾಖಲೆಪತ್ರಗಳು ಇದ್ದವು. ಮೆಟ್ರೊಪಾಲಿಟನ್ ಪೊಲೀಸರ ಭಯೋತ್ಪಾದನೆ ನಿಗ್ರಹ ದಳದವರು ‘ಸರಕಾರದ ರಹಸ್ಯ’ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ವರದಿ ಹೇಳಿದೆ.
Next Story