ಇರಾನ್ನಲ್ಲಿ ಬಸ್ ಅಪಘಾತ | 28 ಪಾಕ್ ಯಾತ್ರಿಕರು ಮೃತ್ಯು
PC :PTI
ಟೆಹ್ರಾನ್ : ಪಾಕಿಸ್ತಾನದಿಂದ ಇರಾಕ್ಗೆ ಶಿಯಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಮಧ್ಯ ಇರಾನ್ನಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು 11 ಮಹಿಳೆಯರ ಸಹಿತ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
ಮಧ್ಯ ಇರಾನ್ ಪ್ರಾಂತದ ಯಾಜ್ದ್ನಲ್ಲಿ ಮಂಗಳವಾರ ತಡರಾತ್ರಿ ಅಪಘಾತ ಸಂಭವಿಸಿದ್ದು ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. 28 ಮಂದಿ ಸಾವನ್ನಪ್ಪಿದ್ದು ಇತರ 23 ಮಂದಿ ಗಾಯಗೊಂಡಿದ್ದಾರೆ. 7 ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಯಾಜ್ದ್ ಪ್ರಾಂತದ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story