ಕೆನಡಾ: ದೇವಾಲಯದ ಗೋಡೆಯಲ್ಲಿ ಭಾರತ ವಿರೋಧಿ ಘೋಷಣೆ
Photo: twitter/Arya_Anviksha_
ಒಟ್ಟಾವ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಸರ್ರೆ ನಗರದಲ್ಲಿನ ದೇವಾಲಯದ ಗೋಡೆಯ ಮೇಲೆ ಭಾರತ ವಿರೋಧಿ ಮತ್ತು ಖಾಲಿಸ್ತಾನಿ ಪರ ಘೋಷಣೆಗಳನ್ನು ಬರೆಯಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸರ್ರೆಯಲ್ಲಿನ ಶ್ರೀಮಾತಾ ಭಾಮೇಶ್ವರಿ ದುರ್ಗಾ ದೇವಾಲಯದಲ್ಲಿ ಈ ಘಟನೆ ನಡೆದಿದ್ದು ಗುರುವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕರು ಗಮನಿಸಿ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ವಾಂಕೋವರ್ ನಲ್ಲಿನ ಭಾರತದ ಕಾನ್ಸುಲೇಟ್ ಕಚೇರಿಗೆ ಲಾಕ್ಡೌನ್ ಮಾಡುವುದಾಗಿ ಕೆನಡಾದಲ್ಲಿನ ಖಾಲಿಸ್ತಾನಿ ಪರ ಸಂಘಟನೆ `ಸಿಖ್ಸ್ ಫಾರ್ ಜಸ್ಟಿಸ್' ಬೆದರಿಕೆ ಒಡ್ಡಿರುವ ಮಧ್ಯೆಯೇ ಈ ಪ್ರಕರಣ ನಡೆದಿದೆ. ಖಾಲಿಸ್ತಾನಿ ಸಂಘಟನೆಯ ಬೆದರಿಕೆಯ ಹಿನ್ನೆಲೆಯಲ್ಲಿ ವಾಂಕೋವರ್ ನಲ್ಲಿನ ಭಾರತದ ಕಾನ್ಸುಲೇಟ್ ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಒಟ್ಟಾವದಲ್ಲಿನ ಭಾರತದ ರಾಯಭಾರಿ ಕಚೇರಿ ಕೆನಡಾದ ವಿದೇಶಾಂಗ ಇಲಾಖೆಗೆ ಮನವಿ ಮಾಡಿದೆ.
Next Story