ದೇಶದ ರಾಜಕೀಯ ಪ್ರಕ್ರಿಯೆಯಲ್ಲಿ ಪಾಕ್ ಹಸ್ತಕ್ಷೇಪ : ಕೆನಡಾ ಗುಪ್ತಚರ ಸಂಸ್ಥೆ
Photo : freepik
ಟೊರಂಟೊ: ದೇಶದ ರಾಜಕೀಯ ಪ್ರಕ್ರಿಯೆಯಲ್ಲಿ ನಡೆದಿರುವ ವಿದೇಶಿ ಹಸ್ತಕ್ಷೇಪದಲ್ಲಿ ಪಾಕಿಸ್ತಾನದ ಪಾತ್ರವಿರುವ ಸಾಧ್ಯತೆಯಿದೆ ಎಂದು ಕೆನಡಾದ ಬೇಹುಗಾರಿಕಾ ಸಂಸ್ಥೆ ಹೇಳಿದೆ.
ಕೆನಡಾದ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್ ನಡೆಸುತ್ತಿರುವ `ಕೆನಡಾದ ಫೆಡರಲ್ ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಸಾರ್ವಜನಿಕ ತನಿಖೆ'ಗೆ 2019ರ ಜೂನ್ನಲ್ಲಿ ಸಲ್ಲಿಸಲಾಗಿರುವ ವರ್ಗೀಕೃತ ಮಾಹಿತಿಯನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಲಾಗಿದೆ. `ಕೆನಡಾದಲ್ಲಿ ಪಾಕಿಸ್ತಾನಿ ಹಿತಾಸಕ್ತಿಗಳನ್ನು ಬಲಪಡಿಸುವ ಉದ್ದೇಶದಿಂದ ಪಾಕಿಸ್ತಾನ ಮೂಲದ ಕೆನಡಾ ರಾಜಕಾರಣಿಗಳ ಮೇಲೆ ರಹಸ್ಯವಾಗಿ ಪ್ರಭಾವ ಬೀರಲು ಕೆನಡಾದಲ್ಲಿರುವ ಪಾಕ್ ಅಧಿಕಾರಿಗಳು ಪ್ರಯತ್ನಿಸಿದ್ದಾರೆ' ಎಂದು ವರ್ಗೀಕೃತ ಮಾಹಿತಿಯಲ್ಲಿ ಉಲ್ಲೇಖಿಸಿರುವುದಾಗಿ `ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ.
Next Story