ಗಾಝಾ ಜನತೆಗೆ ಬೆಂಬಲ ಸೂಚಿಸಿ ಪಾಕಿಸ್ತಾನದಲ್ಲಿ ಹೊಸ ವರ್ಷ ಸಂಭ್ರಮಾಚರಣೆಯನ್ನು ನಿಷೇಧಿಸಿದ ಹಂಗಾಮಿ ಪ್ರಧಾನಿ
ಇಸ್ಲಮಾಬಾದ್ (ಪಾಕಿಸ್ತಾನ): ಗಾಝಾ ಜನತೆಗೆ ಬೆಂಬಲ ಸೂಚಿಸುವ ಸಲುವಾಗಿ ಪಾಕಿಸ್ತಾನದಾದ್ಯಂತ ಹೊಸ ವರ್ಷ ಸಂಭ್ರಮಾಚರಣೆಯನ್ನು ನಿಷೇಧಿಸಿ, ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಗುರುವಾರ ಆದೇಶ ಹೊರಡಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶವನ್ನುದ್ದೇಶಿಸಿ ಮಾತನಾಡಿದ ಕಾಕರ್, ಫೆಲೆಸ್ತೀನಿಯನ್ನರಿಗೆ ಬೆಂಬಲ ಸೂಚಿಸಿ ಹಾಗೂ ಹೊಸ ವರ್ಷದಂದು ಸಮಚಿತ್ತತೆ ಹಾಗೂ ನಮ್ರತೆಯನ್ನು ಪ್ರದರ್ಶಿಸಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.
“ಫೆಲೆಸ್ತೀನಿನಲ್ಲಿನ ಗಂಭೀರ ಕಳವಳಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ನಮ್ಮ ಫೆಲೆಸ್ತೀನ್ ಸಹೋದರರು ಮತ್ತು ಸಹೋದರಿಯರಿಗೆ ನಮ್ಮ ಬೆಂಬಲವನ್ನು ಸೂಚಿಸುವ ಸಲುವಾಗಿ ಹೊಸ ಸಂಭ್ರಮಾಚರಣೆಯ ವಿರುದ್ಧ ಸರ್ಕಾರದ ವಿರುದ್ಧ ಕಠಿಣ ನಿಷೇಧ ಹೇರಲಾಗಿದೆ” ಎಂದು ಅವರು ಪ್ರಕಟಿಸಿದ್ದಾರೆ.
Next Story