ಚೀನಾದಲ್ಲಿ ಭೂಕುಸಿತ | 10 ಮನೆಗಳು ಸಮಾಧಿ, 30 ಮಂದಿ ನಾಪತ್ತೆ

Photo Credit | PTI
ಬೀಜಿಂಗ್: ನೈಋತ್ಯ ಚೀನಾದ ಸಿಚುವಾನ್ ಪ್ರಾಂತದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 10 ಮನೆಗಳು ಸಮಾಧಿಯಾಗಿದ್ದು ಸುಮಾರು 30 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಜುನ್ಲಿಯಾನ್ ಕೌಂಟಿಯ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ತುರ್ತು ಕಾರ್ಯಪಡೆಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದು ಇಬ್ಬರನ್ನು ಮಣ್ಣಿನಡಿಯಿಂದ ರಕ್ಷಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ. ನಾಪತ್ತೆಯಾದವರನ್ನು ಆದಷ್ಟು ಬೇಗ ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನೂ ನಡೆಸುವಂತೆ ಅಧ್ಯಕ್ಷ ಕ್ಸಿಜಿಂಪಿಂಗ್ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ವರದಿ ಹೇಳಿದೆ.
Next Story