50 ಕೆ.ಜಿ.ಗಿಂತ ಕಡಿಮೆ ತೂಕದವರು ಗಾಳಿಗೆ ಹಾರಿಹೋಗಬಹುದು: ಸುಂಟರಗಾಳಿ ಎಚ್ಚರಿಕೆ ನೀಡಿದ ಚೀನಾ

ಸಾಂದರ್ಭಿಕ ಚಿತ್ರ - Photo : PTI
ಬೀಜಿಂಗ್: ವಾರಾಂತ್ಯದಲ್ಲಿ ಉತ್ತರ ಚೀನಾದಲ್ಲಿ ತೀವ್ರ ಸುಂಟರ ಗಾಳಿ ಬೀಸಬಹುದು 50 ಕೆ.ಜಿ.ಗಿಂತ ಕಡಿಮೆ ತೂಕದವರು ಗಾಳಿಗೆ ಹಾರಿಹೋಗಬಹುದು ಎಂದು ಅಧಿಕಾರಿಗಳು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಗಂಟೆಗೆ 150 ಕಿ.ಮೀ ವೇಗದೊಂದಿಗೆ ಸುಂಟರಗಾಳಿ ಮಂಗೋಲಿಯಾದಿಂದ ದಕ್ಷಿಣ ಚೀನಾದತ್ತ ಮುಂದುವರಿಯುತ್ತಿದೆ. ಮರಳು ಮತ್ತು ಧೂಳಿನಿಂದ ಕೂಡಿದ ಸುಂಟರ ಗಾಳಿಗೆ ಹವಾಮಾನ ಬದಲಾವಣೆ ಮೂಲ ಕಾರಣವಾಗಿದ್ದು ಜನತೆ ಸಾಧ್ಯವಾದಷ್ಟು ಮನೆಯಿಂದ ಹೊರಗೆ ಬರಬಾರದು ಎಂದು ಸಲಹೆ ನೀಡಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರವಿವಾರ ಬೀಜಿಂಗ್ನಲ್ಲಿ ನಿಗದಿಯಾಗಿದ್ದ ಹಾಫ್ ಮ್ಯಾರಥಾನ್ ಓಟವನ್ನು ಮುಂದೂಡಲಾಗಿದ್ದು ಸಾರ್ವಜನಿಕ ಪಾರ್ಕ್ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಶುಕ್ರವಾರ 56 ರೈಲು ಸೇವೆಗಳನ್ನು ಶನಿವಾರ 103 ರೈಲು ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಚೀನಾದ ಏರ್ಲೈನ್ಸ್ ಶನಿವಾರ 17 ವಿಮಾನಗಳನ್ನು ರದ್ದುಗೊಳಿಸಿದೆ. ಬೀಜಿಂಗ್ನ ಅಧಿಕಾರಿಗಳು ಗಾಳಿ ಸಂಬಂಧಿ ಅಪಘಾತಗಳನ್ನು ಕಡಿಮೆಗೊಳಿಸುವ ಕ್ರಮವಾಗಿ 4,800ಕ್ಕೂ ಅಧಿಕ ಮರಗಳ ಕೊಂಬೆಗಳನ್ನು ಕಡಿದಿದ್ದಾರೆ ಎಂದು ವರದಿಯಾಗಿದೆ.