ತೈವಾನ್ ಉಪಾಧ್ಯಕ್ಷರ ಅಮೆರಿಕ ಭೇಟಿಗೆ ಚೀನಾ ಖಂಡನೆ
ವಿಲಿಯಂ ಲಾಯ್. | Photo : ANI
ಬೀಜಿಂಗ್: ತೈವಾನ್ ಉಪಾಧ್ಯಕ್ಷ ವಿಲಿಯಂ ಲಾಯ್ ಅಮೆರಿಕಕ್ಕೆ ಭೇಟಿ ನೀಡಿರುವುದನ್ನು ಖಂಡಿಸಿರುವ ಚೀನಾ, ತನ್ನ ಸಾರ್ವಭೌಮತ್ವದ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ.
ವಿಲಿಯಂ ಲಾಯ್ ತೈವಾನ್ ಸ್ವಾತಂತ್ರ್ಯದ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಮೊಂಡುತನದಿಂದ ಬದ್ಧರಾಗಿದ್ದಾರೆ ಮತ್ತು ಪದೇ ಪದೇ ತೊಂದರೆ ನೀಡುವ ವ್ಯಕ್ತಿಯಾಗಿದ್ದಾರೆ. ತೈವಾನ್ ಪ್ರತ್ಯೇಕತಾವಾದಿಗಳು ಅಮೆರಿಕಕ್ಕೆ ಭೇಟಿ ನೀಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.
ವಿಲಿಯಂ ಲಾಯ್ ಪರಗ್ವೇಗೆ ಪ್ರಯಾಣಿಸುವ ಮಾರ್ಗದ ಮಧ್ಯೆ ಶನಿವಾರ ನ್ಯೂಯಾರ್ಕ್ ಗೆ ಭೇಟಿ ನೀಡಿದ್ದರು. ಬುಧವಾರ ಪರಗ್ವೇಯಿಂದ ಮರಳುವ ಸಂದರ್ಭದಲ್ಲ|ಊ ಅವರು ಸ್ಯಾನ್ಫ್ರಾನ್ಸಿಸ್ಕೋಗೆ ಭೇಟಿ ನೀಡುವ ಕಾರ್ಯಕ್ರಮವಿದೆ.
Next Story