ಚೀನಾ | ಪೆವಿಲಿಯನ್ ಗೆ ಸಿಡಿಲು ಬಡಿದು 6 ಮಂದಿ ಮೃತ್ಯು : 10 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
ಬೀಜಿಂಗ್ : ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತದ ಚಾಂಗ್ಝೌತ ನಗರದಲ್ಲಿ ಪಾರ್ಕ್ನು ಪೆವಿಲಿಯನ್(ವಿಶ್ರಾಂತಿ ಕೋಣೆ)ಗೆ ಸಿಡಿಲು ಬಡಿದು 6 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿರುವುದಾಗಿ ಸರಕಾರಿ ಸ್ವಾಮ್ಯದ ಕ್ಸಿನ್ ವಾ ಮಾಧ್ಯಮ ಸೋಮವಾರ ವರದಿ ಮಾಡಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ. ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿದ್ದ ಚೀನಾದಲ್ಲಿ ಕಳೆದ ಕೆಲ ದಿನಗಳಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಕಳೆದ ತಿಂಗಳು ಉತ್ತರ ಚೀನಾದ ಶಾಂಕ್ಸಿ ಪ್ರಾಂತದಲ್ಲಿ ಭಾರೀ ಮಳೆಯಿಂದಾಗಿ ಹೆದ್ದಾರಿ ಸೇತುವೆ ಕುಸಿದು ಬಿದ್ದು ಕನಿಷ್ಠ 38 ಮಂದಿ ಸಾವನ್ನಪ್ಪಿದ್ದರು.
Next Story