ಚೀನಾ ಪ್ರತಿಕ್ರಮ: ಅಮೆರಿಕದ ಪ್ರಮುಖ ಆಮದುಗಳ ಮೇಲೆ 15% ಸುಂಕ

ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ | Photo: PTI
ಬೀಜಿಂಗ್: ಮಾರ್ಚ್ 10ರಿಂದ ಅಮೆರಿಕದ ಕೆಲವು ಆಮದುಗಳ ಮೇಲೆ 10%ದಿಂದ 15%ದಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸುವುದಾಗಿ ಚೀನಾದ ಹಣಕಾಸು ಇಲಾಖೆ ಹೇಳಿದೆ.
ಮೆಕ್ಸಿಕೋ ಮತ್ತು ಕೆನಡಾದ ಆಮದುಗಳ ಮೇಲೆ 25% ಸುಂಕ ಮತ್ತು ಚೀನಾದ ಸರಕುಗಳ ಮೇಲಿನ ತೆರಿಗೆಯನ್ನು 20%ಕ್ಕೆ ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಜಾರಿಗೊಳಿಸಿದ ಬೆನ್ನಲ್ಲೇ ಚೀನಾ ಪ್ರತಿಕ್ರಮ ಘೋಷಿಸಿದೆ. ಸೋಯಾಬೀನ್ಸ್, ಜೋಳ, ಹಂದಿ ಮಾಂಸ, ಗೋಮಾಂಸ, ಜಲಚರ ಉತ್ಪನ್ನಗಳು, ಹಣ್ಣುಗಳು, ತರಕಾರಿ ಹಾಗೂ ಡೈರಿ ಉತ್ಪನ್ನಗಳ ಮೇಲೆ 10% ಸುಂಕ, ಕೋಳಿಮಾಂಸ, ಗೋಧಿ, ಧಾನ್ಯ ಮತ್ತು ಹತ್ತಿಯ ಮೇಲೆ 15% ಸುಂಕ ವಿಧಿಸುವುದಾಗಿ ಚೀನಾ ಹೇಳಿದೆ. ಜತೆಗೆ, ಅಮೆರಿಕದ 25 ಸಂಸ್ಥೆಗಳ ಮೇಲೆ ರಫ್ತು ಮತ್ತು ಹೂಡಿಕೆ ನಿರ್ಬಂಧಗಳನ್ನು ವಿಧಿಸಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story