ಪಾಕಿಸ್ತಾನದ 12 ಕೋಟಿ ಡಾಲರ್ ಸಾಲದ ಅವಧಿ ವಿಸ್ತರಣೆಗೆ ಚೀನಾ, ಸೌದಿ, ಯುಎಇ ಸಮ್ಮತಿ
Pakistan flag. Credit: PTI File Photo
ಇಸ್ಲಾಮಾಬಾದ್ : ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದ 12 ಶತಕೋಟಿ ಡಾಲರ್ ಸಾಲದ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲು ಚೀನಾ, ಸೌದಿ ಅರೆಬಿಯಾ ಮತ್ತು ಯುಎಇ ಸಮ್ಮತಿಸಿವೆ ಎಂದು ಪಾಕಿಸ್ತಾನದ ವಿತ್ತಸಚಿವರು ಹೇಳಿದ್ದಾರೆ.
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಈ ತಿಂಗಳಾಂತ್ಯದಲ್ಲಿ ಪಾಕಿಸ್ತಾನಕ್ಕೆ 7 ಶತಕೋಟಿ ಡಾಲರ್ ಸಾಲವನ್ನು ಅನುಮೋದಿಸುವ ನಿರೀಕ್ಷೆಯಿದೆ. ಐಎಂಎಫ್ ಕಾರ್ಯಕಾರಿ ಮಂಡಳಿ ಈ ತಿಂಗಳಾಂತ್ಯದಲ್ಲಿ ನಡೆಯುವ ಸಾಧ್ಯತೆಯಿದೆ. ಚೀನಾ, ಸೌದಿ ಅರೆಬಿಯಾ ಮತ್ತು ಯುಎಇಯ ಸಾಲದ ಅವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿದೆ.
ಸಾಲದ ಅವಧಿಯನ್ನು ಮೂರು ಅಥವಾ ಐದು ವರ್ಷಕ್ಕೆ ವಿಸ್ತರಿಸಲು ಐಎಂಎಫ್ ಸಲಹೆ ನೀಡಿತ್ತು ಎಂದು ಪಾಕಿಸ್ತಾನದ ವಿತ್ತಸಚಿವ ಮುಹಮ್ಮದ್ ಔರಂಗಝೇಬ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸೆನೆಟ್ನ ಹಣಕಾಸು ಸ್ಥಾಯಿ ಸಮಿತಿ ಸಭೆಯ ಬಳಿಕ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು ಎಂದು ವರದಿಯಾಗಿದೆ.
Next Story