ಟ್ರಂಪ್ ಮೇಲಿನ ಗುಂಡಿನ ದಾಳಿಯ ಬಗ್ಗೆ ಸ್ವತಂತ್ರ ತನಿಖೆಗೆ ಸಮ್ಮತಿ
ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್ : ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವುದಕ್ಕೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಸಮ್ಮತಿಸಿದ್ದು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ.
ಚುನಾವಣಾ ರ್ಯಾ ಲಿಯ ಸಂದರ್ಭ ಟ್ರಂಪ್ ಭದ್ರತೆಯ ಹೊಣೆ ವಹಿಸಿದ್ದ ಸೀಕ್ರೆಟ್ ಸರ್ವಿಸ್(ರಹಸ್ಯ ಗುಪ್ತಚರ ಸೇವೆ) ಏಜೆಂಟರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದ್ದು ಕರ್ತವ್ಯದ ಕಡೆ ಗಮನ ನೀಡದ ಸೀಕ್ರೆಟ್ ಸರ್ವಿಸ್ ಮುಖ್ಯಸ್ಥೆ ಕಿಂಬರ್ಲಿ ಚಿಯಾಟಲ್ ತಕ್ಷಣ ರಾಜೀನಾಮೆ ನೀಡಬೇಕೆಂಬ ಆಗ್ರಹ ಹೆಚ್ಚಿದೆ.
ಏನು ನಡೆದಿದೆ, ಹೇಗೆ ನಡೆದಿದೆ ಮತ್ತು ಇಂತಹ ಘಟನೆಗಳು ಮುಂದೆಂದೂ ನಡೆಯದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಫೆಡರಲ್, ರಾಜ್ಯ ಅಥವಾ ಸ್ಥಳೀಯ ಏಜೆನ್ಸಿಗಳು ನಡೆಸುವ ತನಿಖೆಗೆ ಸೀಕ್ರೆಟ್ ಸರ್ವಿಸ್ ಸಹಕರಿಸುತ್ತದೆ. ಅಧ್ಯಕ್ಷ ಜೋ ಬೈಡನ್ ಘೋಷಿಸಿದ ಸ್ವತಂತ್ರ ಪರಿಶೀಲನೆಯ ಮಹತ್ವವನ್ನು ನಾವು ತಿಳಿದಿದ್ದೇವೆ ಮತ್ತು ಇದರಲ್ಲಿ ಪೂರ್ಣ ರೀತಿಯಲ್ಲಿ ತೊಡಗಿಸಿಕೊಳ್ಳಲಿದ್ದೇವೆ' ಎಂದು ಸೀಕ್ರೆಟ್ ಸರ್ವಿಸ್ ಮುಖ್ಯಸ್ಥೆ ಕಿಂಬರ್ಲಿ ಚಿಯಾಟಲ್ ಹೇಳಿದ್ದಾರೆ.