ರಶ್ಯಕ್ಕೆ ಅಮೆರಿಕದಿಂದ ಅಕ್ರಮ ರಫ್ತಿಗೆ ಸಂಚು : ಭಾರತೀಯನ ವಿರುದ್ಧ ಆರೋಪ
Photo: ISTOCK
ವಾಷಿಂಗ್ಟನ್ : ಅಮೆರಿಕದ ವಾಯುಯಾನ ವಸ್ತುಗಳನ್ನು ರಶ್ಯದ ಬಳಕೆದಾರರಿಗೆ ಅಕ್ರಮವಾಗಿ ರಫ್ತು ಮಾಡಲು ಸಂಚು ರೂಪಿಸಿದ್ದಕ್ಕಾಗಿ ಭಾರತೀಯನ ಮೇಲೆ ಅಮೆರಿಕದಲ್ಲಿ ಆರೋಪ ಹೊರಿಸಿರುವುದಾಗಿ ನ್ಯಾಯಾಂಗ ಇಲಾಖೆ ಶುಕ್ರವಾರ ಹೇಳಿದೆ.
ಸಂಜಯ್ ಕೌಶಿಕ್(57 ವರ್ಷ)ನನ್ನು ಅಕ್ಟೋಬರ್ 17ರಂದು ಮಿಯಾಮಿಯಲ್ಲಿ ಬಂಧಿಸಿದ್ದು ಗುರುವಾರ ದೋಷಾರೋಪಣೆ ಮಾಡಲಾಗಿದೆ. ರಫ್ತು ನಿಯಂತ್ರಣ ಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿ ವಾಯುಯಾನ ವಸ್ತುಗಳನ್ನು ರಶ್ಯದ ಬಳಕೆದಾರರಿಗೆ ಅಕ್ರಮವಾಗಿ ರಫ್ತು ಮಾಡಲು ಸಂಚು ಹೂಡಿರುವ ಆರೋಪ ಹೊರಿಸಲಾಗಿದೆ. ಜತೆಗೆ, ಒರೆಗಾನ್ ರಾಜ್ಯದಿಂದ ಭಾರತದ ಮೂಲಕ ರಶ್ಯಕ್ಕೆ ನೌಕಾಯಾನ ಮತ್ತು ವಿಮಾನ ನಿಯಂತ್ರಣ ವ್ಯವಸ್ಥೆಯನ್ನು ಅಕ್ರಮವಾಗಿ ರಫ್ತು ಮಾಡಲು ಪ್ರಯತ್ನಿಸಿದ ಆರೋಪವನ್ನೂ ಹೊರಿಸಲಾಗಿದೆ. ಆರೋಪ ಸಾಬೀತಾದರೆ ಗರಿಷ್ಟ 20 ವರ್ಷ ಜೈಲುಶಿಕ್ಷೆ ಮತ್ತು 1 ದಶಲಕ್ಷ ಡಾಲರ್ ದಂಡ ವಿಧಿಸಬಹುದು ಎಂದು ಹೇಳಿಕೆ ತಿಳಿಸಿದೆ.
Next Story