ಇಮ್ರಾನ್ ಪಕ್ಷದ ಸಂವಿಧಾನ ಉಲ್ಲಂಘನೆ ಸಾಬೀತಾಗಿದೆ: ಪಾಕ್ ಸುಪ್ರೀಂಕೋರ್ಟ್
ಇಮ್ರಾನ್ ಖಾನ್
ಇಸ್ಲಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಸಂವಿಧಾನ ಉಲ್ಲಂಘನೆಯಾಗಿರುವುದು ಆ ಪಕ್ಷದ ಅಧ್ಯಕ್ಷರ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್ ಶನಿವಾರ ಹೇಳಿದೆ.
ಪಿಟಿಐ ಸಂವಿಧಾನದ ಪ್ರಕಾರ ಪಕ್ಷದ ಅಧ್ಯಕ್ಷರ ಚುನಾವಣೆ ಪ್ರತೀ 2 ವರ್ಷಕ್ಕೆ, ಇತರ ಪದಾಧಿಕಾರಿಗಳ ಚುನಾವಣೆ ಪ್ರತೀ 3 ವರ್ಷಕ್ಕೆ ನಡೆಯಬೇಕು. ಆದರೆ ಈ ಅಂಶವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಚುನಾವಣಾ ಚಿಹ್ನೆಯಾದ `ಬ್ಯಾಟ್' ಅನ್ನು ಪಿಟಿಐ ಪಕ್ಷಕ್ಕೆ ಮರಳಿ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಪೇಷಾವರ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Next Story