ಶಸ್ತ್ರಾಸ್ತ್ರ ಕಳ್ಳಸಾಗಣೆ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಡೆನ್ಮಾರ್ಕ್ ನಕಾರ
PC ; NDTV
ಕೋಪನ್ ಹ್ಯಾಗನ್: ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದ ಆರೋಪಿ, ಡೆನ್ಮಾರ್ಕ್ನ ಪ್ರಜೆ ನೀಲ್ಸ್ ಹಾಲ್ಕ್ ನನ್ನು ಹಸ್ತಾಂತರಿಸುವಂತೆ ಭಾರತ ಸಲ್ಲಿಸಿದ್ದ ಮನವಿಯನ್ನು ಡೆನ್ಮಾರ್ಕ್ನ ನ್ಯಾಯಾಲಯ ಗುರುವಾರ ತಳ್ಳಿಹಾಕಿದೆ.
1995ರಲ್ಲಿ ಪೂರ್ವ ಭಾರತದಲ್ಲಿ ಸರಕು ವಿಮಾನದಿಂದ ರೈಫಲ್ಸ್ಗಳು, ರಾಕೆಟ್ ಲಾಂಚರ್ಗಳು ಮತ್ತು ಕ್ಷಿಪಣಿಗಳನ್ನು ಕೆಳಗೆ ಉದುರಿಸಿದ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಹಾಲ್ಕ್ ಒಪ್ಪಿಕೊಂಡಿದ್ದ. ಈ ಶಸ್ತ್ರಾಸ್ತ್ರಗಳನ್ನು ದೇಶದಲ್ಲಿನ ಕ್ರಾಂತಿಕಾರಿ ಗುಂಪೊಂದಕ್ಕೆ ತಲುಪಿಸಲು ಉದ್ದೇಶಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದರು. ಭಾರತಕ್ಕೆ ಹಸ್ತಾಂತರಿಸಿದರೆ ಜೀವಕ್ಕೆ ಅಪಾಯದ ಭಯವಿದೆ ಎಂದು 62 ವರ್ಷದ ಹಾಲ್ಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಭಾರತ ನೀಡಿದ ಹೆಚ್ಚುವರಿ ರಾಜತಾಂತ್ರಿಕ ಖಾತರಿಗಳ ಹೊರತಾಗಿಯೂ ಹಾಲ್ಕ್ ಭಾರತದಲ್ಲಿ ಚಿತ್ರಹಿಂಸೆ ಅಥವಾ ಇತರ ಅಮಾನವೀಯ ಪ್ರಕ್ರಿಯೆಯನ್ನು ಎದುರಿಸುವ ನಿಜವಾದ ಅಪಾಯವಿದೆ ಎಂದು ಹಿಲ್ಲೆರೋಡ್ ಜಿಲ್ಲಾ ನ್ಯಾಯಾಲಯ ಹೇಳಿದೆ.
Next Story