ಅಮೆರಿಕದ ಗುಪ್ತಚರ ಮಾಹಿತಿಯನ್ನು ಪುಟಿನ್ ಕಡೆಗಣಿಸಿದರೇ?
ವ್ಲಾದಿಮಿರ್ ಪುಟಿನ್ | Photo : PTI
ಮಾಸ್ಕೊ : ಐಸಿಸ್ ನ ಗುಂಪೊಂದು ಮಾಸ್ಕೊದಲ್ಲಿ ದಾಳಿ ನಡೆಸಲು ಸಂಚುಹೂಡಿದೆಯೆಂಬ ಮಾಹಿತಿಯನ್ನು ಅಮೆರಿಕದ ಗುಪ್ತಚರ ಏಜೆನ್ಸಿಗಳು ಇತ್ತೀಚಿನ ವಾರಗಳಲ್ಲಿ ಕಲೆಹಾಕಿದ್ದವು. ಈ ಗುಪ್ತಚರ ಮಾಹಿತಿಯನ್ನು ಈ ತಿಂಗಳ ಆರಂಭದಲ್ಲಿ ರಶ್ಯನ್ ಅಧಿಕಾರಿಗಳ ಜೊತೆ ಹಂಚಿಕೊಳ್ಳಲಾಗಿತ್ತೆಂದು ಅಮೆರಿಕದ ಬೇಹುಗಾರಿಕಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ರಶ್ಯದ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯಿದೆಯೆಂಬ ಪಾಶ್ಚಾತ್ಯ ರಾಷ್ಟ್ರಗಳು ನೀಡಿದ ಎಚ್ಚರಿಕೆಯು, ರಶ್ಯನ್ನರನ್ನು ಬೆದರಿಸುವ ತಂತ್ರವಾಗಿದೆಯೆಂದು ರಶ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈ ವಾರದ ಆರಂಭದಲ್ಲಿ ಬಹಿರಂಗವಾಗಿ ಟೀಕಿಸಿದ್ದರು. ನಮ್ಮ ಸಮಾಜವನ್ನು ಅಸ್ಥಿರಗೊಳಿಸುವ ಹಾಗೂ ಭಯಭೀತಗೊಳಿಸುವ ಮತ್ತು ಬ್ಲಾಕ್ಮೇಲ್ ಮಾಡುವ ತಂತ್ರ ಇದಾಗಿದೆಯೆಂದು ಅವರು ಹೇಳಿದ್ದರು
Next Story