ವಿಮಾನದಿಂದ ತೆವಳಿಕೊಂಡು ಇಳಿದ ಅಂಗವಿಕಲ: ವಿಮಾನಯಾನ ಸಂಸ್ಥೆಗೆ ರೂ. 81 ಲಕ್ಷ ದಂಡ
ಸಾಂದರ್ಭಿಕ ಚಿತ್ರ (PTI)
ಲಾಸ್ವೆಗಾಸ್: ವಿಮಾನಯಾನ ಸಂಸ್ಥೆ ವ್ಹೀಲ್ಚೇರ್ ಒದಗಿಸಲು ವಿಫಲವಾಗಿ, ಅಂಗವಿಕಲ ಪ್ರಯಾಣಿಕರೊಬ್ಬರು ಏರ್ ಕೆನಡಾ ವಿಮಾನದಿಂದ ತೆವಳಿಕೊಂಡು ಇಳಿಯಬೇಕಾದ ಪರಿಸ್ಥಿತಿ ಉದ್ಭವಿಸಿದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗೆ ಕೆನಡಾ ಸಾರಿಗೆ ಸಂಸ್ಥೆ 97,500 ಡಾಲರ್ (ರೂ. 81.20 ಲಕ್ಷ) ದಂಡ ವಿಧಿಸಿದೆ ಎಂದು Independent ವರದಿ ಮಾಡಿದೆ. ಈ ಘಟನೆ ಆಗಸ್ಟ್ 30ರಂದು ಸಂಭವಿಸಿದ್ದು, ಸ್ಪಾಸ್ಟಿಕ್ ಸೆರೆಬ್ರಲ್ ಪ್ಲಾಸಿಯಿಂದ ಬಳುತ್ತಿದ್ದ ರಾಂಡಿ ಹಾಡ್ಗಿನ್ಸ್ ಕಾಲುಗಳ ಚಲನೆ ಕಳೆದುಕೊಂಡಿದ್ದರು. ಆದಾಗ್ಯೂ ಬಲವಂತವಾಗಿ ಅವರು ಸ್ವತಃ ಹರಸಾಹಸ ಮಾಡಿ ಇಳಿಯಬೇಕಾಯಿತು ಎಂದು ವರದಿಯಾಗಿದೆ.
"2023ರ ಆಗಸ್ಟ್ 30ರಂದು ಏರ್ ಕೆನಡಾ ವಿಮಾನದಿಂದ ಇಳಿಯಲು ಈ ಪ್ರಯಾಣಿಕನಿಗೆ ವ್ಹೀಲ್ಚೇರ್ ಒದಗಿಸಲು ವಿಫಲವಾಗಿದೆ. ಉವರು ಸ್ಪಾಸ್ಟಿಕ್ ಸೆರೆಬ್ರಲ್ ಪ್ಲಾಸಿಯಿಂದ ಬಳಲುತ್ತಿದ್ದು, ಕಾಲುಗಳು ಚಲನಹೀನವಾಗಿದ್ದವು. ಟರ್ಮಿನಲ್ನಲ್ಲಿ ಈ ಪ್ರಯಾಣಿಕ ಕಾಯುತ್ತಿದ್ದರೂ, ಅವರ ವೈಯಕ್ತಿಕ ಅಗತ್ಯತೆಗಳ ಬಗ್ಗೆ ವಿಚಾರಿಸಿಲ್ಲ" ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ 49 ವರ್ಷ ವಯಸ್ಸಿನ ಅವರ ಪತ್ನಿ ಡಿಯನ್ನಾ ಹಾಡ್ಗಿನ್ಸ್ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಆಗಸ್ಟ್ ನಲ್ಲಿ ಲಾಸ್ ವೇಗಸ್ಗೆ ತೆರಳಿದ್ದರು. ವಿಮಾನದ ಸಹಾಯಕರು ವ್ಹೀಲ್ಚೇರ್ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಅವರು ತಮಾಷೆ ಮಾಡುತ್ತಿದ್ದಾರೆ ಎಂದು ಪ್ರಯಾಣಿಕ ಭಾವಿಸಿದ್ದರು. ಹಾಗಾದರೆ ವಿಮಾನದ ಮುಂದಿನ ಆಸನದಲ್ಲಿ ಕುಳಿತುಕೊಳ್ಳಬಹುದೇ ಎಂದು ವಿಮಾನ ಸಹಾಯಕ ಕೇಳಿದ್ದಾಗಿ ದಂಪತಿ ವಿವರಿಸಿದ್ದಾರೆ.
"ಆಗ ನಾನು ಸಾಧ್ಯವಿಲ್ಲ; ನಾನು ವ್ಹೀಲ್ಚೇರ್ ನಲ್ಲಿದ್ದೇನೆ. ನಡೆದಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾಗಿ ಕೆನಡಾ ಮಾಧ್ಯಮಗಳು ವರದಿ ಮಾಡಿವೆ. ಕೊನೆಗೆ ದೇಹದ ಮೇಲ್ಭಾಗದ ಬಲವನ್ನು ಬಳಸಿ 12 ಸಾಲುಗಳವರೆಗೆ ತೆವಳಿಕೊಂಡೇ ಹೋಗಬೇಕಾಯಿತು ಎಂದು ವರದಿಯಾಗಿದೆ.