ಅಪರೂಪದ ಬೃಹತ್ ಕ್ಯಾಟ್ಫಿಶ್ ಕಾಂಬೋಡಿಯಾದಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ | PC : X/@aikunming
ಹನೋಯಿ : ಅಳಿವಿನ ಅಂಚಿನಲ್ಲಿರುವ 6 ಬೃಹತ್ ಮೆಕಾಂಗ್ ಕ್ಯಾಟ್ಫಿಶ್(ಬೆಕ್ಕುಮೀನು, ಇದನ್ನು ಕೇರಳದಲ್ಲಿ ಕಾರಿ ಎಂದು ಕರೆಯಲಾಗುತ್ತದೆ) ಇತ್ತೀಚೆಗೆ ಕಾಂಬೋಡಿಯಾದಲ್ಲಿ ಬಲೆಗೆ ಬಿದ್ದಿದ್ದು ಇದು ಅಪರೂಪದ ಮೀನುತಳಿಯ ಉಳಿವಿನ ಭರವಸೆಯನ್ನು ಪುನರುಜ್ಜೀವನಗೊಳಿಸಿದೆ.
ಬಲೆಗೆ ಬಿದ್ದ ಮೀನುಗಳನ್ನು ಮತ್ತೆ ನೀರಿಗೆ ಬಿಡಲಾಗಿದೆ. ನೀರಿನಡಿಯ ಈ ದೈತ್ಯಮೀನು 3 ಮೀಟರ್ ನಷ್ಟು ಉದ್ದ ಬೆಳೆಯಬಹುದು. ಇದು ಸುಮಾರು 300 ಕಿ.ಗ್ರಾಂನಷ್ಟು ತೂಕ ಇರುತ್ತದೆ. ಈಗ ಆಗ್ನೇಯ ಏಶ್ಯಾದ ಮೆಕಾಂಗ್ ನದಿಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಕ್ಯಾಟ್ಫಿಶ್ ತಳಿ ಮಿತಿಮೀರಿದ ಮೀನುಗಾರಿಕೆ, ಮೀನುಗಳು ಮೊಟ್ಟೆಯಿಡಲು ಅನುಸರಿಸುವ ವಲಸೆ ಮಾರ್ಗವನ್ನು ತಡೆಯುವ ಅಣೆಕಟ್ಟುಗಳು ಮತ್ತು ಇತರ ಅಡ್ಡಿಗಳಿಂದಾಗಿ ಇತ್ತೀಚಿನ ದಶಕಗಳಲ್ಲಿ ಅಳಿವಿನ ಅಂಚಿಗೆ ತಲುಪಿದೆ.
Next Story