ಇಂಡೋನೇಶ್ಯಾದಲ್ಲಿ ಭೂಕಂಪನ
ಜಕಾರ್ತ: ಇಂಡೋನೇಶ್ಯಾದ ಸುಮಾತ್ರ ದ್ವೀಪದಲ್ಲಿ ಮಂಗಳವಾರ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದೆ ಎಂದು ದೇಶದ ಭೂವಿಜ್ಞಾನಶಾಸ್ತ್ರ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪ 12 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು, ಆದರೆ ತ್ಸುನಾಮಿಯ ಅಪಾಯವಿಲ್ಲ. ಸಾವು-ನೋವು, ನಾಶ-ನಷ್ಟದ ಬಗ್ಗೆ ಇದುವರೆಗೆ ಮಾಹಿತಿಯಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story