ಬ್ರಿಟನ್ನಲ್ಲಿ `ಎಮರ್ಜೆನ್ಸಿ' ಸಿನೆಮಾ ಪ್ರದರ್ಶನಕ್ಕೆ ಸಿಖ್ ಗುಂಪಿನ ಅಡ್ಡಿ

ಎಮರ್ಜೆನ್ಸಿ' ಸಿನೆಮಾ | PC : X
ಲಂಡನ್ : ಲಂಡನ್ನ ಕೆಲವು ಚಿತ್ರಮಂದಿರಗಳಲ್ಲಿ ಕಂಗನಾ ರಣಾವತ್ ಅವರ `ಎಮರ್ಜೆನ್ಸಿ' ಸಿನೆಮಾ ಪ್ರದರ್ಶನಕ್ಕೆ ಬ್ರಿಟನ್ನ ಸಿಖ್ ಗುಂಪುಗಳು ಅಡ್ಡಿಪಡಿಸಿರುವುದಾಗಿ ವರದಿಯಾಗಿದೆ.
ಸಿನೆಮಾ ಸಿಖ್ ವಿರೋಧಿ ಎಂದು ಕಂಡುಬಂದಿರುವುದರಿಂದ ಸಿನೆಮದ ವಿರುದ್ಧ ಪ್ರತಿಭಟನೆ ನಡೆಸುವಂತೆ `ದಿ ಸಿಖ್ ಪ್ರೆಸ್ ಅಸೋಸಿಯೇಷನ್ ಗ್ರೂಪ್' ಕರೆ ನೀಡಿತ್ತು. ಅದರಂತೆ ವೆಸ್ಟ್ಮಿಡ್ಲ್ಯಾಂಡ್ ಪ್ರದೇಶದ ಬರ್ಮಿಂಗ್ಹಾಮ್ ಮತ್ತು ವೊಲ್ವರ್ಹ್ಯಾಂಪ್ಟನ್ನಲ್ಲಿ ಸಿನೆಮ ಮಂದಿರದ ಎದುರು ಪ್ರತಿಭಟನೆ ನಡೆಸಿದ್ದು ಸಿನೆಮ ಪ್ರದರ್ಶನಕ್ಕೆ ಅಡ್ಡಿಪಡಿಸಿರುವುದಾಗಿ ವರದಿಯಾಗಿದೆ.
1970ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಅವಧಿಯ ಕುರಿತ ಈ ಸಿನೆಮಾದಲ್ಲಿ ನಟಿ ಕಂಗನಾ ರಣಾವತ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರ ನಿರ್ವಹಿಸುತ್ತಿದ್ದಾರೆ.
Next Story