ಇಂಧನ ಕೊರತೆ: ಗಾಝಾದ್ಯಂತ ಇಂಟರ್ನೆಟ್, ಫೋನ್ ಸಂಪರ್ಕ ಸ್ಥಗಿತ
ಸಾಂದರ್ಭಿಕ ಚಿತ್ರ
ಗಾಝಾ : ಇಂಧನದ ಕೊರತೆಯಿಂದಾಗಿ ಗುರುವಾರ ಗಾಝಾ ಪಟ್ಟಿಯಾದ್ಯಂತ ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ಸ್ಥಗಿತಗೊಂಡಿದ್ದು ದೀರ್ಘಾವಧಿಯ ಸಂವಹನ ಕಡಿತದ ಮುನ್ಸೂಚನೆ ಇದಾಗಿರಬಹುದು ಎಂದು ಗಾಝಾ ಪ್ರದೇಶಕ್ಕೆ ಸಂವಹನ ವ್ಯವಸ್ಥೆ ಒದಗಿಸುವ ಫೆಲೆಸ್ತೀನಿಯನ್ ಸಂಸ್ಥೆ ಹೇಳಿದೆ.
ಸಂವಹನ ಸ್ಥಗಿತವು ಗಾಝಾದ 2.3 ದಶಲಕ್ಷ ಜನರನ್ನು ಪರಸ್ಪರ ಮತ್ತು ಹೊರಗಿನ ಪ್ರಪಂಚದಿಂದ ದೂರವಿಡುತ್ತದೆ. ಗಾಝಾ ಪ್ರದೇಶದಲ್ಲಿ ಇಸ್ರೇಲ್ ಮುಂದುವರಿಸಿರುವ ದಾಳಿಯು ತೀವ್ರವಾದ ಮಾನವೀಯ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಹೇಳಿಕೆ ತಿಳಿಸಿದೆ. ಈ ಮಧ್ಯೆ, ಗಾಝಾಕ್ಕೆ ಆಹಾರ, ನೀರು ಮತ್ತು ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಅನುವು ಮಾಡಿಕೊಡಲು ಮಾನವೀಯ ವಿರಾಮಕ್ಕೆ ಅನುವು ಮಾಡಿಕೊಡುವಂತೆ ಇಸ್ರೇಲ್ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಿದೆ. ಇಂಧನ ಕೊರತೆಯಿಂದಾಗಿ ನೆರವು ಒದಗಿಸುವ ಕಾರ್ಯಕ್ಕೆ ಸಮಸ್ಯೆಯಾಗಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
Next Story