ಇಂಗ್ಲೆಂಡ್ | ಚೂರಿ ಇರಿತಕ್ಕೆ ಇಬ್ಬರು ಮಹಿಳೆಯರು ಬಲಿ

ಸಾಂದರ್ಭಿಕ ಚಿತ್ರ
ಲಂಡನ್ : ಬಕಿಂಗ್ಹ್ಯಾಮ್ಶೈರ್ನಲ್ಲಿರುವ ಮಿಲ್ಟನ್ ಕೀಯ್ನ್ಸ್ ನಗರದಲ್ಲಿ ಚೂರಿ ಇರಿತದಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಘಟನೆಗೆ ಸಂಬಂಧಿಸಿ ಕೊಲೆ ಮತ್ತು ಕೊಲೆ ಪ್ರಯತ್ನದ ಆರೋಪದಲ್ಲಿ 49 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಕ್ರಿಸ್ಮಸ್ ದಿನದಂದು ಸಂಜೆ ಸಾಂತಾಕ್ರೂಸ್ ಅವೆನ್ಯೂ ಪ್ರದೇಶದ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಇಬ್ಬರು ಮಹಿಳೆಯರ ಮೃತದೇಹ ಪತ್ತೆಯಾಗಿದೆ. ಒಬ್ಬ ಬಾಲಕ ಹಾಗೂ ಯುವಕ ಗಂಭೀರವಾಗಿ ಗಾಯಗೊಂಡಿದ್ದರು. ಮನೆಯ ನಾಯಿ ಕೂಡಾ ಗಾಯಗೊಂಡಿದ್ದು ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲ ನೀಡದೆ ಮೃತಪಟ್ಟಿದೆ.
ಗಾಯಗೊಂಡವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಶಂಕಿತ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ವರದಿಯಾಗಿದೆ.
Next Story