ಇಯು : ಭಾರತೀಯ ಪ್ರಯಾಣಿಕರಿಗೆ ಹೊಸ ವೀಸಾ ನಿಯಮ ಜಾರಿ
ಸಾಂದರ್ಭಿಕ ಚಿತ್ರ | Photo: NDTV
ಬ್ರಸೆಲ್ಸ್: ಮುಂದಿನ ಬೇಸಿಗೆ ರಜೆಗೂ ಮುನ್ನ ಭಾರತೀಯ ಪ್ರಜೆಗಳಿಗೆ ಸುಲಭವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡುವ ಹೊಸ ವೀಸಾ ನಿಯಮಗಳನ್ನು ಯುರೋಪಿಯನ್ ಯೂನಿಯನ್(ಇಯು) ಘೋಷಿಸಿದೆ.
ಹೊಸ ನಿಯಮಾವಳಿಗಳ ಪ್ರಕಾರ, ಭಾರತೀಯ ನಾಗರಿಕರು ಈಗ ಬಹುವರ್ಷದ ಮಾನ್ಯತೆಯೊಂದಿಗೆ ದೀರ್ಘಾವಧಿಯ `ಶೆಂಗೆನ್ ವೀಸಾ'ಗಳಿಗೆ ಸುಲಭ ಪ್ರವೇಶವನ್ನು ಪಡೆಯಬಹುದು. ಇದು ಈ ಹಿಂದಿನ ವೀಸಾ ನಿಯಮಕ್ಕಿಂತ ಭಿನ್ನವಾಗಿದೆ. ಯುರೋಪಿಯನ್ ಕಮಿಷನ್ ಭಾರತೀಯ ಪ್ರಜೆಗಳಿಗೆ ಬಹುಪ್ರವೇಶ ವೀಸಾಗಳನ್ನು ನೀಡುವಲ್ಲಿ ನಿರ್ಧಿಷ್ಟ ನಿಯಮಗಳನ್ನು ಅಳವಡಿಸಿಕೊಂಡಿದೆ. ಇದು ಇಲ್ಲಿಯವರೆಗಿನ ವೀಸಾ ನಿಯಮಕ್ಕಿಂತ ಸರಳವಾಗಿದೆ. ದೇಶದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ದೀರ್ಘಾವಧಿಯ ಬಹುಪ್ರದೇಶದ ಶೆಂಗೆನ್ ವೀಸಾಗಳನ್ನು ಎರಡು ವರ್ಷಗಳ ಮಾನ್ಯತೆಯೊಂದಿಗೆ ಪಡೆಯಲು ಅನುಮತಿಸುತ್ತದೆ. ಹಿಂದಿನ ಮೂರು ವರ್ಷಗಳಲ್ಲಿ ಎರಡು ವೀಸಾಗಳನ್ನು ಯಶಸ್ವಿಯಾಗಿ ಪಡೆದುಕೊಂಡು ಮತ್ತು ಕಾನೂನುಬದ್ಧವಾಗಿ ಬಳಸಿದ ನಂತರ ಈ ವಿಸ್ತøತ ಸಿಂಧುತ್ವ ಅನ್ವಯವಾಗುತ್ತದೆ ಎಂದು ಹೇಳಿಕೆ ತಿಳಿಸಿದೆ. ಶೆಂಗೆನ್ ವೀಸಾವು ಯಾವುದೇ 180 ದಿನಗಳ ಅವಧಿಯಲ್ಲಿ 90 ದಿನಗಳವರೆಗೆ ತಾತ್ಕಾಲಿಕ ಭೇಟಿಗಾಗಿ ಪ್ರವೇಶ ಪರವಾನಿಗೆಯಾಗಿದೆ