ನೆದರ್ಲ್ಯಾಂಡ್ನಲ್ಲಿ ಸ್ಫೋಟ | ಒಬ್ಬ ಮೃತ್ಯು ; 3 ಮಂದಿಗೆ ಗಾಯ
PC : AP
ಹೇಗ್ : ನೆದರ್ಲ್ಯಾಂಡ್ನ ಹೇಗ್ ನಗರದ ಬಳಿಯ ಮಾರಿಯಾಹೋವ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅಪಾರ್ಟ್ಮೆಂಟ್ ಕಟ್ಟಡವೊಂದು ಕುಸಿದಿದ್ದು ಒಬ್ಬ ವ್ಯಕ್ತಿ ಮೃತಪಟ್ಟು ಇತರ ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಟ್ಟಡ ಕುಸಿದು ಬಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಕುಸಿದ ಕಟ್ಟಡದ ಅವಶೇಷಗಳಡಿಯಿಂದ 4 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story