ಕ್ರಿಮಿಯಾ ಸೇನಾನೆಲೆಯಲ್ಲಿ ಬೆಂಕಿ ದುರಂತ; 2 ಸಾವಿರ ಜನರ ಸ್ಥಳಾಂತರ
ಮಾಸ್ಕೊ: ರಶ್ಯ ಸ್ವಾಧೀನ ಪಡಿಸಿಕೊಂಡಿರುವ ಕ್ರಿಮಿಯಾ ಪ್ರಾಂತದಲ್ಲಿರುವ ಸೇನಾ ಸಿಬಂದಿ ತರಬೇತಿ ಕೇಂದ್ರದಲ್ಲಿ ಬುಧವಾರ ಬೆಂಕಿ ದುರಂತ ಸಂಭವಿಸಿದ್ದು 2000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಧಿಕಾರಿಗಳು ಬೆಂಕಿಯ ಕಾರಣವನ್ನು ಬಹಿರಂಗಪಡಿಸಿಲ್ಲ. ಆದರೆ ಈ ಸ್ಥಳದಲ್ಲಿ ಸ್ಫೋಟದ ಸದ್ದು ಕೇಳಿಸಿದೆ ಎಂದು ರಶ್ಯದ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಕಿರೋವ್‍ಸ್ಕಿ ಜಿಲ್ಲೆಯಲ್ಲಿನ ಮಿಲಿಟರಿ ತರಬೇತಿ ಕೇಂದ್ರದಲ್ಲಿ ಬೆಂಕಿ ದುರಂತದ ಬಳಿಕ ಇದರ ಸಮೀಪದ ಸುಮಾರು 2 ಸಾವಿರ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಈ ಪ್ರದೇಶದ ಮೂಲಕ ಹಾದುಹೋಗುವ ತವ್ರಿಡಾ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story