ಇತಿಹಾಸದಲ್ಲೇ ಪ್ರಥಮ ಬಾರಿಗೆ ನ್ಯೂಯಾರ್ಕ್ ನಗರದ ಶಾಲೆಗೆ ದೀಪಾವಳಿ ರಜೆ
Screengrab : ANI
ನ್ಯೂಯಾರ್ಕ್ : ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ ಹಬ್ಬದ ಆಚರಣೆಗಾಗಿ ನವೆಂಬರ್ 1ರಂದು ಶಾಲೆಗಳಿಗೆ ರಜೆ ಘೋಷಿಸಿರುವುದಾಗಿ ಮೇಯರ್ ಕಚೇರಿ ಘೋಷಿಸಿದೆ.
ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ನಗರದ ಬದ್ಧತೆಯನ್ನು ಗುರುತಿಸುವ ಕ್ರಮವಾಗಿ ನ್ಯೂಯಾರ್ಕ್ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ದೀಪಾವಳಿ ಹಬ್ಬದ ಕಾರಣ ನವೆಂಬರ್ 1ರಂದು ಶಾಲೆಗಳಿಗೆ ರಜೆ ಸಾರಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಬೆಳಕಿನ ಹಬ್ಬವಾದ ದೀಪಾವಳಿ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಅಮೆರಿಕದ ಅತೀ ಎತ್ತರದ ಕಟ್ಟಡವಾದ `ವರ್ಲ್ಡ್ ಟ್ರೇಡ್ ಸೆಂಟರ್' ಅನ್ನು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲಾಗಿದೆ. ವರ್ಲ್ಡ್ ಟ್ರೇಡ್ ಸೆಂಟರ್ ಅನ್ನು ಕಿತ್ತಳೆ, ಹಳದಿ ಮತ್ತು ನೀಲಿ ದೀಪಗಳಿಂದ ಅಲಂಕರಿಸಿರುವ ವೀಡಿಯೊವನ್ನು ಎಎನ್ಐ ಸುದ್ದಿಸಂಸ್ಥೆ ಪ್ರಸಾರ ಮಾಡಿದೆ.
#WATCH | #NewYork | Deputy Commissioner, Mayors Office for International Affairs, New York City, Dilip Chauhan says, "This year Diwali is special. For the first time in the history of New York City, schools will be closed on Friday, November 1 for the festival of Diwali." pic.twitter.com/t6YfRJyxiz
— TIMES NOW (@TimesNow) October 30, 2024
New York Schools to be closed for Diwali The tallest building in the USA, One World Trade Center lit up in lights of radiant colours ahead of DiwaliNew York | Deputy Commissioner, Mayors Office for International Affairs, New York City, Dilip Chauhan says, "This year Diwali… pic.twitter.com/YCT2OvUJJu
— Satyaagrah (@satyaagrahindia) October 30, 2024