ನೇಪಾಳ | ರಶ್ಯದ ಐವರು ಪರ್ವತಾರೋಹಿಗಳು ಮೃತ್ಯು
PC : istockphoto
ಕಠ್ಮಂಡು : ವಿಶ್ವದ ಐದನೇ ಅತೀ ಎತ್ತರದ ಧವಳಗಿರಿ ಪರ್ವತವನ್ನು ಏರುವ ಪ್ರಯತ್ನದಲ್ಲಿ ಜಾರಿ ಬಿದ್ದು ರಶ್ಯದ ಐವರು ಪರ್ವತಾರೋಹಿಗಳು ಮೃತಪಟ್ಟಿರುವುದಾಗಿ ನೇಪಾಳದ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
26,788 ಅಡಿ ಎತ್ತರದ ಧವಳಗಿರಿ ಪರ್ವತವನ್ನು ಏರುವ ಯತ್ನದಲ್ಲಿದ್ದ ಈ ಪರ್ವತಾರೋಹಿಗಳು ರವಿವಾರದಿಂದ ನಾಪತ್ತೆಯಾಗಿದ್ದರು. ರಕ್ಷಣಾ ತಂಡದ ಹೆಲಿಕಾಪ್ಟರ್ ಮಂಗಳವಾರ ಅವರ ಮೃತದೇಹವನ್ನು ಪತ್ತೆಹಚ್ಚಿದೆ ಎಂದು ಎಎಂಪರ್ವತಾರೋಹಣ ಸಂಸ್ಥೆಯ ಪೆಂಬಾ ಜಂಗ್ಬು ಶೆರ್ಪಾ ಹೇಳಿದ್ದಾರೆ.
ಇವರಲ್ಲಿ ಇಬ್ಬರು ಪರ್ವತದ ಶಿಖರ ತಲುಪಿದ್ದರೆ ಉಳಿದವರು ವಿಫಲವಾಗಿದ್ದರು. ಪರ್ವತದಿಂದ ಇಳಿಯುವಾಗ ದುರಂತ ಸಂಭವಿಸಿದ್ದು ಮೂಲ ಶಿಬಿರದೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು. ಪರ್ವತದ ಕೊರಕಲಿನಲ್ಲಿ ಬಿದ್ದಿರುವ ಮೃತದೇಹಗಳನ್ನು ಕೆಳಗೆ ತರುವುದು ದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story