ಕೆನ್ಯಾದಲ್ಲಿ ಪ್ರವಾಹ | 91 ಮಂದಿ ನಾಪತ್ತೆ
Photo | PC : X \ @KenyaRedCross
ನೈರೋಬಿ: ಕೆನ್ಯಾದಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದಿಂದ ಕನಿಷ್ಟ 91 ಮಂದಿ ನಾಪತ್ತೆಯಾಗಿದ್ದು ಅವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದಾಗಿ ಆಂತರಿಕ ಸಚಿವಾಲಯ ಹೇಳಿದೆ.
ಸೋಮವಾರ ಕೇಂದ್ರ ಕೆನ್ಯಾದ ಮಯಿ ಮಹಿಯು ನಗರದಲ್ಲಿ ಭೂಕುಸಿತ ಮತ್ತು ದಿಢೀರ್ ಪ್ರವಾಹದಿಂದ ಕನಿಷ್ಟ 46 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಯಿ ಮಹಿಯು ನಗರದ ಬಹುತೇಕ ರಸ್ತೆಗಳಲ್ಲಿ ನೆರೆನೀರು ಹರಿಯುತ್ತಿದ್ದು ಮನೆಗಳು ಜಲಾವೃತಗೊಂಡಿವೆ. ಕಾರುಗಳು ಹಾಗೂ ರೈಲ್ವೇ ಹಳಿಗಳು ನೆರೆನೀರಲ್ಲಿ ಕೊಚ್ಚಿಹೋಗಿವೆ.
ಮಾರ್ಚ್ನಿಂದ ಕೆನ್ಯಾದಲ್ಲಿ ನಿರಂತರ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದಿಂದ ಕನಿಷ್ಟ 169 ಮಂದಿ ಮೃತಪಟ್ಟಿದ್ದು 1,85,000ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ವರದಿಯಾಗಿದೆ.
Next Story