ಫ್ಲೋರಿಡಾ: ವಿಮಾನದ ಲ್ಯಾಂಡಿಂಗ್ ಗೇರ್ನಲ್ಲಿ ಎರಡು ಮೃತದೇಹಗಳು ಪತ್ತೆ
PC: @CBSNews
ನ್ಯೂಯಾರ್ಕ್: ಫ್ಲೋರಿಡಾದ ಫೋರ್ಟ್ ಲಾಡರ್ಡೇಲ್-ಹಾಲಿವುಡ್ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಭೂಸ್ಪರ್ಷ ಮಾಡಿದ ಜೆಟ್ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್ನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ವಿಮಾನದ ನಿಗದಿತ ಪ್ರಯಾಣ ಮುಗಿದ ಬಳಿಕ ನಡೆಸಲಾಗುವ ಪರಿಶೀಲನೆಯ ಸಂದರ್ಭ ಮೃತದೇಹಗಳು ಪತ್ತೆಯಾಗಿವೆ. ನ್ಯೂಯಾರ್ಕ್ನ ಜೆಎಫ್ಕೆ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ 3 ಗಂಟೆಗಳ ಪ್ರಯಾಣದ ಬಳಿಕ ಲಾಡರ್ಡೇಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು.
ಮೃತವ್ಯಕ್ತಿಗಳ ವಿವರವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Next Story