ಅಲ್-ಖಾದಿರ್ ಟ್ರಸ್ಟ್ ಪ್ರಕರಣ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 14 ವರ್ಷ ಜೈಲು ಶಿಕ್ಷೆ

ಇಮ್ರಾನ್ ಖಾನ್ (Photo: PTI)
ಇಸ್ಲಾಮಾಬಾದ್: ಪಾಕಿಸ್ತಾನದ ನ್ಯಾಯಾಲಯ ಶುಕ್ರವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು 190 ಮಿಲಿಯನ್ ಪೌಂಡ್ ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿದ್ದು, ಇಮ್ರಾನ್ ಖಾನ್ ಗೆ 14 ವರ್ಷ ಮತ್ತು ಪತ್ನಿ ಬುಷ್ರಾ ಬೀಬಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜೈಲು ಶಿಕ್ಷೆಯ ಜೊತೆಗೆ ಖಾನ್ ಗೆ 10 ಲಕ್ಷ ರೂ. ಮತ್ತು ಬುಶ್ರಾ ಬೀಬಿಗೆ 5 ಲಕ್ಷ ರೂ ದಂಡ ವಿಧಿಸಿದೆ. ದಂಡವನ್ನು ಪಾವತಿಸಲು ವಿಫಲವಾದರೆ ಖಾನ್ ಗೆ ಆರು ತಿಂಗಳು ಮತ್ತು ಬೀಬಿಗೆ ಮೂರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಭ್ರಷ್ಟಾಚಾರ ವಿರೋಧಿ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಈ ಮಹತ್ವದ ತೀರ್ಪನ್ನು ನೀಡಿದ್ದು, ಖಾನ್ ಈಗಾಗಲೇ ಜೈಲಿನಲ್ಲಿದ್ದಾರೆ ಮತ್ತು ಬುಶ್ರಾ ಅವರನ್ನು ನ್ಯಾಯಾಲಯದಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ.
Next Story