ಇಸ್ರೇಲ್ ದಾಳಿಯಲ್ಲಿ ಫೆಲೆಸ್ತೀನ್ ಮಾಜಿ ಸಚಿವ ಮೃತ್ಯು : ವರದಿ
Photo: maktoobmedia.com/
ಗಾಝಾ: ಗಾಝಾ ಪಟ್ಟಿಯಲ್ಲಿ ರವಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಫೆಲೆಸ್ತೀನಿಯನ್ ಅಥಾರಿಟಿ(ಪಿಎ) ಮಾಜಿ ಸಚಿವ ಯೂಸುಫ್ ಸಲಾಮ ಮೃತಪಟ್ಟಿದ್ದಾರೆ ಎಂದು ಹಮಾಸ್ ಆರೋಗ್ಯ ಇಲಾಖೆ ವರದಿ ಮಾಡಿದೆ.
ಮಧ್ಯ ಗಾಝಾ ಪಟ್ಟಿಯ ಅಲ್-ಮಘಾಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ಸಂದರ್ಭ ಫೆಲೆಸ್ತೀನಿಯನ್ ಅಥಾರಿಟಿಯ ಧಾರ್ಮಿಕ ವ್ಯವಹಾರ ಇಲಾಖೆಯ ಮಾಜಿ ಸಚಿವ ಯೂಸುಫ್ ಅವರ ಮನೆಗೆ ಕ್ಷಿಪಣಿ ಅಪ್ಪಳಿಸಿದ್ದು ಯೂಸುಫ್ ಮೃತಪಟ್ಟಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವಫಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ರವಿವಾರ ಮಧ್ಯಗಾಝಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಟ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಶನಿವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುದ್ಧವು ಇನ್ನೂ ಹಲವು ತಿಂಗಳವರೆಗೆ ಮುಂದುವರಿಯಬಹುದು. ಗಾಝಾ ಪಟ್ಟಿಯ ನಿಯಂತ್ರಣವನ್ನು ಇಸ್ರೇಲ್ ಹೊಂದಿದ್ದರೆ ಮಾತ್ರ ಅಕ್ಟೋಬರ್ 7ರ ರೀತಿಯ ಮಾರಣಾಂತಿಕ ಆಕ್ರಮಣಗಳನ್ನು ಪಡೆಯಲು ಸಾಧ್ಯ ಎಂದರು.