ನಾಲ್ಕು ದಿನಗಳ ಕದನ ವಿರಾಮ : 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
Photo: NDTV
ಟೆಲ್ ಅವೀವ್: ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಆರಂಭವಾದ ನಂತರ 25 ಒತ್ತೆಯಾಳುಗಳನ್ನು ಹಮಾಸ್ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ಮೊದಲ ತಂಡದಲ್ಲಿ 13 ಒತ್ತೆಯಾಳು ಸೇರಿದಂತೆ ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಖತರ್ ಹೇಳಿತ್ತು.
ಕದನ ವಿರಾಮವು ಶುಕ್ರವಾರ ಬೆಳಿಗ್ಗಿನಿಂದ ಪ್ರಾರಂಭವಾಗಿದೆ. ಹಮಾಸ್ ನಿಂದ 50 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ನಿಂದ 150 ಫೆಲೆಸ್ತೀನ್ ಕೈದಿಗಳ ಬಿಡುಗಡೆ ಮಾಡುವ ಒಪ್ಪಂದ ನಡೆದಿತ್ತು.
ಇಸ್ರೇಲ್ ದಾಳಿಯಿಂದ ಗಾಝಾ ಪಟ್ಟಿಯಲ್ಲಿ ಮೃತಪಟ್ಟವರ ಸಂಖ್ಯೆ 13 ಸಾವಿರಕ್ಕೇರಿದೆ ಎಂದು ಹಮಾಸ್ನ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
Next Story