ಗಾಝಾ: ಇಸ್ರೇಲ್ ದಾಳಿಯಲ್ಲಿ ಫ್ರಾನ್ಸ್ ರಾಜತಾಂತ್ರಿಕ ಸಿಬ್ಬಂದಿ ಮೃತ್ಯು
Photo- PTI
ಪ್ಯಾರಿಸ್: ಗಾಝಾ ಪಟ್ಟಿಯ ರಫಾ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ತನ್ನ ರಾಜತಾಂತ್ರಿಕ ಸಿಬ್ಬಂದಿ ಮೃತಪಟ್ಟಿರುವುದಾಗಿ ಫ್ರಾನ್ಸ್ ಹೇಳಿದೆ.
ರಫಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ತನ್ನ ರಾಜತಾಂತ್ರಿಕ ಸಿಬ್ಬಂದಿ ಹಾಗೂ ಇತರ ನಾಗರಿಕರು ಆಶ್ರಯ ಪಡೆದಿದ್ದರು. ಈ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದಾಗ ತೀವ್ರ ಗಾಯಗೊಂಡಿದ್ದ ರಾಜತಾಂತ್ರಿಕ ಸಿಬ್ಬಂದಿ ಬಳಿಕ ಮೃತಪಟ್ಟಿದ್ದಾರೆ. ವಸತಿ ಕಟ್ಟಡದ ಮೇಲೆ ದಾಳಿ ನಡೆಸಲು ಕಾರಣವಾದ ಸಂದರ್ಭದ ಬಗ್ಗೆ ವಿವರಿಸುವಂತೆ ಇಸ್ರೇಲ್ ಸರಕಾರವನ್ನು ಆಗ್ರಹಿಸಲಾಗಿದೆ ಎಂದು ಫ್ರಾನ್ಸ್ ಹೇಳಿದೆ.
Next Story