ವೈನ್ ನಾಶಪಡಿಸಲು 216 ಮಿಲಿಯನ್ ಡಾಲರ್ ಮೀಸಲಿರಿಸಿದ ಫ್ರಾನ್ಸ್ ಸರ್ಕಾರ; ಕಾರಣವೇನು ಗೊತ್ತೇ?
ಪ್ಯಾರಿಸ್ : ಫ್ರಾನ್ಸ್ ದೇಶದಲ್ಲಿರುವ ಹೆಚ್ಚುವರಿ ವೈನ್ ಅನ್ನು ನಾಶಪಡಿಸಲು 216 ಮಿಲಿಯನ್ ಡಾಲರ್ ಮೀಸಲಿರಿಸುವುದಾಗಿ ಫ್ರಾನ್ಸ್ ಸರ್ಕಾರ ಶುಕ್ರವಾರ ಹೇಳಿದೆ. ವೈನ್ ಉತ್ಪಾದಕರ ಸಮಸ್ಯೆ ಪರಿಹರಿಸಲು ಹಾಗೂ ಬೆಲೆಗಳಲ್ಲಿ ಸ್ಥಿರತೆ ಸಾಧಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ದೇಶದ ಹಲವು ವೈನ್ ಉತ್ಪಾದನಾ ಪ್ರದೇಶಗಳು, ಪ್ರಮುಖವಾಗಿ ಬೋರ್ಡೀಯಾಕ್ಸ್ ಪ್ರದೇಶದಲ್ಲಿನ ಉತ್ಪಾದಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬದಲಾಗಿರುವ ಜನರ ಅಭ್ಯಾಸಗಳು, ಜೀವನ ಸಾಗಿಸುವ ವೆಚ್ಚದಲ್ಲಿ ಏರಿಕೆ ಹಾಗೂ ಕೋವಿಡ್ ನಂತರದ ಸಂಕಷ್ಟವೇ ವೈನ್ ಬೇಡಿಕೆ ಇಳಿಮುಖಕ್ಕೆ ಕಾರಣವಾಗಿದೆ.
ಹೀಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಉತ್ಪಾದಿಸಲಾದ ವೈನ್ ಪ್ರಮಾಣ ಹೆಚ್ಚಾಗಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಹೀಗೆ ಹೆಚ್ಚುವರಿ ಇರುವ ವೈನ್ ನಾಶಪಡಿಸಲು ಫ್ರಾನ್ಸ್ ಸರ್ಕಾರ ಮುಂದಾಗಿದೆ.
Next Story