ಫ್ರಾನ್ಸ್ ಪ್ರಧಾನಿಯಾಗಿ ಫ್ರಾಂಕೋಯಿಸ್ ಬೇರೊ ಆಯ್ಕೆ
ಫ್ರಾಂಕೋಯಿಸ್ ಬೇರೋ | PC : X/@François Bayrou
ಪ್ಯಾರಿಸ್ : ಫ್ರಾನ್ಸ್ ನ ನೂತನ ಪ್ರಧಾನ ಮಂತ್ರಿಯಾಗಿ ಫ್ರಾಂಕೋಯಿಸ್ ಬೇರೋ ಹೆಸರನ್ನು ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಹೆಸರಿಸಿದ್ದು ದೇಶಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸುವ ಹೊಣೆಯನ್ನು ತನ್ನ ಆಪ್ತನಿಗೆ ವಹಿಸಿದ್ದಾರೆ ಎಂದು ವರದಿಯಾಗಿದೆ.
ಇದರೊಂದಿಗೆ 2024ರಲ್ಲಿ ಫ್ರಾನ್ಸ್ ಮೂವರು ಪ್ರಧಾನಿಗಳಡಿ ಕಾರ್ಯ ನಿರ್ವಹಿಸಿದಂತಾಗುತ್ತದೆ. 9 ದಿನಗಳ ಹಿಂದೆ ಫ್ರಾನ್ಸ್ ಸಂಸತ್ತು ಐತಿಹಾಸಿಕ ಅವಿಶ್ವಾಸ ನಿರ್ಣಯದ ಮೂಲಕ ಮೈಕೆಲ್ ಬಾರ್ನಿಯರ್ ಸರಕಾರವನ್ನು ಪದಚ್ಯುತಗೊಳಿಸಿದ ಬಳಿಕ, ಮ್ಯಾಕ್ರೋನ್ ಪಕ್ಷದ ಮಿತ್ರಪಕ್ಷ ಮೊಡೆಮ್ ಗ್ರೂಫ್ನ ಮುಖ್ಯಸ್ಥ 73 ವರ್ಷದ ಫ್ರಾಂಕೋಯಿಸ್ ಬೇರೊ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ.
Next Story