ಗಾಝಾ: ಇಸ್ರೇಲ್ ವಾಯು ದಾಳಿಗೆ ಫೆಲೆಸ್ತೀನೀಯರಿಗೆ ಆಹಾರ ಒದಗಿಸುತ್ತಿದ್ದ 7 ಮಾನವೀಯ ನೆರವು ಕಾರ್ಯಕರ್ತರ ಬಲಿ
Photo: aljazeera.com
ಗಾಝಾ: ಇಸ್ರೇಲ್ನ ವಾಯು ದಾಳಿಯು ಕೇಂದ್ರ ಗಾಝಾ ಪಟ್ಟಿಯಲ್ಲಿ ಏಳು ಮಾನವೀಯ ನೆರವು ಕಾರ್ಯಕರ್ತರನ್ನು ಬಲಿ ಪಡೆದಿದೆ ಎಂದು ಎನ್ಜಿಒ ವರ್ಲ್ಡ್ ಸೆಂಟ್ರಲ್ ಕಿಚನ್ ಹೇಳಿದೆ.
ಯುದ್ಧಪೀಡಿತ ಗಾಝಾದಲ್ಲಿ ಈ ಎನ್ಜಿಒ ಸಾವಿರಾರು ಫೆಲೆಸ್ತೀನೀಯರಿಗೆ ಆಹಾರ ಒದಗಿಸುತ್ತಿತ್ತು. ಸಂಘರ್ಷರಹಿತ ಸ್ಥಳದಲ್ಲಿ ತಮ್ಮ ಸಂಸ್ಥೆಯ ಕಾರ್ಯಕರ್ತರು ಸಂಸ್ಥೆಯ ಲಾಂಛನ ಹೊಂದಿದ ಹಾಗೂ ರಕ್ಷಿತ ವಾಹನದಲ್ಲಿ ಸಾಗುತ್ತಿದ್ದಾಗ ಈ ವಾಯು ದಾಳಿ ನಡೆದಿದೆ.
ಕೇಂದ್ರ ಗಾಝಾದ ಡೇರ್ ಅಲ್-ಬಲಾಹ್ ಎಂಬಲ್ಲಿ ನಡೆದಿದೆ. ಮೃತರಲ್ಲಿ ಆಸ್ಟ್ರೇಲಿಯಾ, ಪೋಲಂಡ್, ಯುಕೆ, ಅಮೆರಿಕಾ, ಕೆನಡಾ ಮತ್ತು ಫೆಲೆಸ್ತೀನಿ ನಾಗರಿಕ ಸೇರಿದ್ದಾರೆ.
The vehicle of the international aid workers and their Palestinian driver.
— Howard Beckett (@BeckettUnite) April 2, 2024
All murdered by the Israeli airstrike
Look at the precision of the strike. They have been targeted for bringing food to Gaza
Their murders are part of the genocide.
pic.twitter.com/5bgIeaOyxh