ಗಾಝಾ: ಇಸ್ರೇಲ್ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮೃತ್ಯು

ಸಾಂದರ್ಭಿಕ ಚಿತ್ರ | PC : PTI/AP
ಗಾಝಾ: ದಕ್ಷಿಣ ಗಾಝಾ ಪಟ್ಟಿಯ ರಫಾ ನಗರದ ಪೂರ್ವಭಾಗದಲ್ಲಿ ರವಿವಾರ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ.
ಈ ದಾಳಿಯು ಜನವರಿ 19ರಿಂದ ಜಾರಿಯಲ್ಲಿರುವ ಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹಮಾಸ್ ನೇತೃತ್ವದ ಆಂತರಿಕ ಸಚಿವಾಲಯ ಹೇಳಿದೆ.
ಗಾಝಾಕ್ಕೆ ನೆರವು ಹೊತ್ತು ತರುವ ಟ್ರಕ್ಗಳಿಗೆ ಭದ್ರತೆ ಒದಗಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಅಪರಾಧವನ್ನು ಸಚಿವಾಲಯ ಖಂಡಿಸುತ್ತದೆ ಮತ್ತು ಭದ್ರತಾ ಸಿಬ್ಬಂದಿಗಳನ್ನು ಗುರಿಯಾಗಿಸದಂತೆ ಇಸ್ರೇಲ್ ಮೇಲೆ ಮಧ್ಯಸ್ಥಿಕೆದಾರರು ಮತ್ತು ಅಂತರಾಷ್ಟ್ರೀಯ ಸಮುದಾಯ ಒತ್ತಡ ಹಾಕಬೇಕು ಎಂದು ಹೇಳಿಕೆ ಆಗ್ರಹಿಸಿದೆ.
ಗಾಝಾ ಪಟ್ಟಿಯಲ್ಲಿ ಓಡಾಡುತ್ತಿದ್ದ ಹಲವಾರು ಸಶಸ್ತ್ರ ವ್ಯಕ್ತಿಗಳನ್ನು ಗುರಿಯಾಗಿಸಿ ರವಿವಾರ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
Next Story