ಗಾಝಾ: ಕದನ ವಿರಾಮ ಮುರಿದುಬಿದ್ದ ಬಳಿಕ 1600ಕ್ಕೂ ಅಧಿಕ ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ | PC : NDTV
ದೇಯಿರ್ ಅಲ್ ಬಲಾಹ್: ಇಸ್ರೇಲ್ ಹಾಗೂ ಹಮಾಸ್ ಜೊತೆಗೆ ಏರ್ಪಟ್ಟಿದ್ದ ಕದನವಿರಾಮವು ಕಳೆದ ತಿಂಗಳು ಮುರಿದುಬಿದ್ದ ಬಳಿಕ ಗಾಝಾದ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ 1600ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಸಚಿವಾಲಯವು ಸೋಮವಾರ ತಿಳಿಸಿದೆ.
ಕಳೆದ 24 ತಾಸುಗಳಲ್ಲಿ ಇಸ್ರೇಲ್ ಬಾಂಬ್ ದಾಳಿಯಲ್ಲಿ ಮೃತಪಟ್ಟ 38 ಮಂದಿಯ ಮೃತದೇಹಗಳನ್ನು ಗಾಝಾದ ವಿವಿಧ ಆಸ್ಪತ್ರೆಗಳಿಗೆ ತರಲಾಗಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಮಧ್ಯೆ ವಿಶ್ವಸಂಸ್ಥೆಯ ಮಾನವೀಯ ನೆರವಿನ ಕಾರ್ಯಾಲಯದ ಹೇಳಿಕೆಯೊಂದು ಇಸ್ರೇಲ್ ಸೇನೆಯು ಮಾರ್ಚ್ 2ರಿಂದ ಗಾಝಾ ಪಟ್ಟಿಗೆ ಎಲ್ಲಾ ವಿಧದ ಪೂರೈಕೆಗಳನ್ನು ಸ್ಥಗಿತಗೊಳಿಸಿದ್ದು, ಮಾನವೀಯ ಪರಿಸ್ಥಿತಿಯು ಅಲ್ಲಿ ಅತ್ಯಂತ ಚಿಂತಾಜನಕವಾಗಿದೆ ಎಂದು ತಿಳಿಸಿದೆ. ‘‘ಗಾಝಾಗೆ ಈಗ ಇಂಧನವಾಗಲಿ, ಆಹಾರವಾಗಲಿ ಹಾಗೂ ಔಷಧಿಯಾಗಲಿ ಯಾವುದೂ ಬರುತ್ತಿಲ್ಲ’’ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜಾರಿಕ್ ಅವರು ತಿಳಿಸಿದ್ದಾರೆ.
Next Story