ಗಾಝಾ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 25 ಮಂದಿ ಮೃತ್ಯು
PC : aljazeera.com
ಗಾಝಾ: ಗಾಝಾ ಪ್ರದೇಶದಲ್ಲಿ ಸ್ಥಳಾಂತರಗೊಂಡ ಫೆಲೆಸ್ತೀನೀಯರಿಗೆ ಆಶ್ರಯ ಕಲ್ಪಿಸಲು ಸ್ಥಾಪಿಸಲಾದ ಶಿಬಿರಗಳನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದು ಇತರ 23 ಮಂದಿ ಗಾಯಗೊಂಡಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಗುರುವಾರ ವರದಿ ಮಾಡಿದೆ.
ಬುಧವಾರ ತಡರಾತ್ರಿ ಖಾನ್ ಯೂನಿಸ್ ನಗರದ ಅಲ್-ಮವಾಸಿ ಪ್ರದೇಶದಲ್ಲಿ ಹಲವು ಟೆಂಟ್ ಗಳ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಉತ್ತರದ ಬೀತ್ ಲಹಿಯಾ ನಗರದಲ್ಲಿ ಸ್ಥಳಾಂತರಿತಗೊಂಡವರು ಆಶ್ರಯ ಪಡೆದಿದ್ದ ಟೆಂಟ್ ನ ಮೇಲೆ ನಡೆದ ದಾಳಿಯಲ್ಲಿ 7 ಮಂದಿ, ಅಲ್-ಮವಾಸಿ ಬಳಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರರು ಮಾಹಿತಿ ನೀಡಿದ್ದಾರೆ.
Next Story