ಜರ್ಮನಿ | ಜನರ ಮೇಲೆ ಕಾರು ನುಗ್ಗಿಸಿದ ವ್ಯಕ್ತಿ: 28 ಮಂದಿಗೆ ಗಾಯ

Photo Credit | X
ಮ್ಯೂನಿಚ್: ಜರ್ಮನಿಯ ದಕ್ಷಿಣದ ನಗರ ಮ್ಯೂನಿಚ್ನಲ್ಲಿ ವ್ಯಕ್ತಿಯೊಬ್ಬ ಜನರ ಗುಂಪಿನ ಮೇಲೆ ಕಾರನ್ನು ನುಗ್ಗಿಸಿದ್ದು ಕನಿಷ್ಠ 28 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಆರೋಪಿ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದು ಈತ ಅಫ್ಘಾನಿಸ್ತಾನದ ಪ್ರಜೆಯೆಂದು ಗುರುತಿಸಲಾಗಿದ್ದು ಈತ ಜರ್ಮನಿಯಲ್ಲಿ ಆಶ್ರಯ ಕೋರಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮ್ಯೂನಿಚ್ನ ಸಿಟಿ ಸೆಂಟರ್ ಬಳಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರ ಗುಂಪಿನತ್ತ ಆರೋಪಿ ಕಾರನ್ನು ನುಗ್ಗಿಸಿದ್ದಾನೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮ್ಯೂನಿಚ್ ಪೊಲೀಸ್ ಇಲಾಖೆಯ ಅಧಿಕಾರಿ ಕ್ರಿಶ್ಚಿಯನ್ ಹ್ಯೂಬರ್ ಹೇಳಿದ್ದಾರೆ.
Next Story