ಗಿನಿಯಾ: ತೈಲ ಟರ್ಮಿನಲ್ನಲ್ಲಿ ಸ್ಫೋಟ; 8 ಮಂದಿ ಸಾವು
ಸಾಂದರ್ಭಿಕ ಚಿತ್ರ
ಕೊನಾಕ್ರಿ: ಪಶ್ಚಿಮ ಆಫ್ರಿಕಾದ ಗಿನಿಯಾ ದೇಶದ ರಾಜಧಾನಿ ಕೊನಾಕ್ರಿಯ ತೈಲ ಟರ್ಮಿನಲ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ 8 ಮಂದಿ ಮೃತಪಟ್ಟಿದ್ದು ಇತರ 84 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊನಾಕ್ರಿ ಸಮೀಪದ ಕಲೋಮ್ ನಗರದಲ್ಲಿರುವ ಮುಖ್ಯ ತೈಲ ಟರ್ಮಿನಲ್ನಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಸಮೀಪದ ಹಲವು ಮನೆಗಳ ಕಿಟಕಿ ಬಾಗಿಲು ಹಾರಿಹೋಗಿದ್ದು ಈ ಪ್ರದೇಶದಲ್ಲಿರುವ ನೂರಾರು ಮಂದಿ ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡಿಹೋದರು. ತೈಲ ಟರ್ಮಿನಲ್ನಲ್ಲಿದ್ದ ಹಲವು ಟ್ಯಾಂಕರ್ ಟ್ರಕ್ಗಳನ್ನು ತಕ್ಷಣ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಬೆಂಕಿಯ ಕೆನ್ನಾಲಗೆ ಆಕಾಶದೆತ್ತರಕ್ಕೆ ವ್ಯಾಪಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಅಗ್ನಿಶಾಮಕ ದಳಗಳು ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿವೆ. ಬೆಂಕಿ ದುರಂತಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ಸರಕಾರದ ಮೂಲಗಳು ಹೇಳಿವೆ.
Next Story